ಮಂಗಳೂರು: ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮದವರೇ ಹೇಳುತ್ತಿದ್ದಾರೆ ಬಿಟ್ರೆ ನಮಗೇನು ಅದರ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.
ಪುನರ್ ರಚನೆ ಯಾವಾಗ ಬೇಕಾದರೂ ಆಗಬಹುದು. ಔತಣಕೂಟಕ್ಕೆ ಸಿಎಂ ಸೋಮವಾರ ಕರೆದಿದ್ದಾರೆ. ಸಿಎಂ ಅವರು ಕರ್ದು ಬೇಕಾದಷ್ಟು ವಿಚಾರಗಳು ಮಾತಾಡೋದಿದೆ. ಆದರೆ ನೀವೆಲ್ಲ ಸೇರಿಕೊಂಡು ಒಂದು ತೀರ್ಮಾನಕ್ಕೆ ಬಂದಂತಿದೆ. ಸಚಿವ ಸಂಪುಟ ಪುನರ್ ರಚನೆ ಅಂತದ್ದೇನು ಇಲ್ಲ, ಸಭೆ ಕರೆದಿದ್ದಾರೆ ಅಲ್ಲಿ ಏನೇನು ಚರ್ಚೆ ಆಗುತ್ತೆ ನೋಡೋಣ ಎಂದರು.

