ಮಂಗಳೂರು : ನೂತನ ಸಂಪುಟ ಪುನರ್ ರಚನೆಗೆ ಭಾರಿ ಪೈಪೋಟಿ ಹಿನ್ನೆಲೆ ಯು ಟಿ ಖಾದರ್ ಗೆ ಡಿಸಿಎಂ ಸ್ಥಾನದ ಚರ್ಚೆ ನಡಯುತ್ತಿದ್ದು, ಸ್ಪೀಕರ್ ಯು ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ, ಆದ್ರೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಸ್ಪೀಕರ್ ಆಗಿಯೇ ಇದ್ದೇನೆ, ನಾನು ಯಾವುದೇ ಆಂಕಾಂಕ್ಷಿ ಅಲ್ಲ. ಯಾರಿಗೆ ಹೇಗೆ ಕೊಡಬೇಕು, ಯಾವುದು ಕೊಡಬೇಕು ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಬಿಟ್ಟಿದ್ದು, ಸ್ಥಾನಮಾನ‌ ಕೊಟ್ಟರೆ ಈವರೆಗೆ ನನ್ನ ಕೆಲಸ ನೋಡಿ ಕೊಡುತ್ತಾರೆ.

2023 ರಲ್ಲಿ ಮಂತ್ರಿ ಸ್ಥಾನ ಅಂತ ಇತ್ತು, ಆದ್ರೆ ಸಭಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಅದನ್ನ ನಿಷ್ಠೆಯಿಂದ ನಿಭಾಯಿಸಿದ್ದೇನೆ. ನನಗೆ ಪೋಸ್ಟ್ ಇಂಪೋರ್ಟೆಂಟ್ ಅಲ್ಲ, ವರ್ಕ್ ಇಂಪೋರ್ಟೆಂಟ್. ಸಭಾಧ್ಯಕ್ಷ ಸ್ಥಾನ ಬಿಟ್ಟು ಬಂದ ಮೇಲೆ ರಾಜಕೀಯ ವಿಚಾರದ ಬಗ್ಗೆ ಮಾತನಾಡುತ್ತೇನೆ. ನನ್ನ ಮತ್ತು ಜಮೀರ್ ನಡುವೆ ‌ಸಚಿವ ಸ್ಥಾನಕ್ಕೆ ಪೈಪೋಟಿ ಇಲ್. ಇಂದು ಮತ್ತೆ ನಾಳೆ ಬೆಂಗಳೂರಿನಲ್ಲಿ ಇದ್ದೇನೆ. ರಾಜಕೀಯ ಬೇರೆ, ಬೇಟಿಯಾಗುವ ವಿಚಾರ ಬೇರೆ ಎಂದರು.

ಹಿತೈಷಿ ಗಳಾಗಿ ಬೇಟಿ ಯಾಗುತ್ತೇವೆ. ಸ್ಪೀಕರ್ ಆಗಿ ಖುಷಿಯಿಂದ ಇದ್ದೇನೆ. ಶಾಸಕನಾದವ ಒಮ್ಮೆಯಾದರೂ ಜೀವನದಲ್ಲಿ ಸ್ಪೀಕರ್ ಆಗಬೇಕು. ನಮ್ಮನ್ನು ಇಷ್ಟು ಬೆಳೆಸಿದ್ದು ಪಕ್ಷ, ಕಾರ್ಯಕರ್ತರು, ಮತದಾರರು. ಮೂರು ವರ್ಷ ಸ್ಪೀಕರ್ ಆಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಮಂಗಳೂರಿನಲ್ಲಿ ಸ್ಪೀಕರ್ ಯು ಟಿ ಖಾದರ್ ಹೇಳಿಕೆ ನೀಡಿದ್ದಾರೆ.

View this post on Instagram

A post shared by News Karnataka (@newskarnataka)