ಮಂಗಳೂರು : ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಎನ್‌ಐಆರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರಲ್ಲಿ ಜನರ ಸಹಭಾಗಿತ್ವವೂ ಅಗತ್ಯವಾಗಿದೆ. ಹೀಗಾಗಿ ಬಿಎಲ್‌ಒಗಳು ಮನೆಗೆ ತಲುಪಿಸಿರುವ ಎಸ್‌ಐಆರ್ ಫಾರ್ಮ್ ಭರ್ತಿ ಮಾಡಿ ಜುಲೈ 29 ರೊಳಗೆ ತಲುಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು 11.86 ಶೇಕಡಾ ಮಾತ್ರ ಜಿಲ್ಲೆಯಲ್ಲಿ ಪ್ರಗತಿ ಆಗಿದ್ದು, ಫಾರಂಗಳನ್ನು ಡಿಜಿಟೈಜೇಶನ್ ಮಾಡಿರುವುದು ಮಾತ್ರ ಮತದಾರರ ಪಟ್ಟಿಯಲ್ಲಿ ಬರುತ್ತದೆ. ಅದು ಮತದಾರರ ಹಕ್ಕು ಆಗಿದ್ದು, ಇದನ್ನು ನೀಡಲು ಅಧಿಕಾರಿಗಳ ಜೊತೆಗೆ ಮತದಾರರು ಕೈಜೋಡಿಸಬೇಕು.

ಒಂದೇ ದಿನ ಬಿಎಲ್‌ಒಗಳು ಮನೆಗೆ ಬಂದಾಗ ಅದನ್ನು ನೀಡಲು ಮುಂದಾಗಿ. ತುಂಬಾ ತಡ ಮಾಡಿ ಕೊಟ್ಟಲ್ಲಿ ಸಾವಿರಾರು ಫಾರಂಗಳನ್ನು ಒಂದೆರಡು ದಿನಗಳಲ್ಲಿ ಡಿಜಿಟೈಜೇಶನ್ ಮಾಡಲು ನಮಗೂ ಕಷ್ಟ ಸಾಧ್ಯ.

ಹೀಗಾಗಿ ಈ ವಾರದೊಳಗೆ ಮುಂದಾಗಿಯೇ ನೀಡಿದರೆ ನಮಗೆ ಸಹಕಾರಿ ಆಗುತ್ತದೆ. ಈ ಬಗ್ಗೆ ಏನಾದರೂ ಸಮಸ್ಯೆಗಳು ಇದ್ದಲ್ಲಿ ಮತದಾರರ ಸೆಂಟರ್ ಕೇಂದ್ರದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.