ಮಂಗಳೂರು: ಲೇಡಿಹಿಲ್‌ನ ನಾರಾಯಣಗುರು ವೃತ್ತದ ಬಳಿ ಫುಟ್ ಪಾತ್‌ಗೆ ಅಳವಡಿಸಲಾದ ರೇಲಿಂಗ್ (ಸ್ಟೀಲ್ ಸರಳುಗಳು)ಗಳಲ್ಲಿ ಕೆಲವು ಕಿತ್ತು ಹೋಗಿ ಕೆಳಕ್ಕೆ ಬಿದ್ದಿವೆ.
ಪಾದಚಾರಿಗಳು ಫುಟ್ ಪಾತ್ ನಿಂದ ಎಲ್ಲೆಂದರಲ್ಲಿ ರಸ್ತೆಗೆ ಇಳಿಯುವುದನ್ನು ತಡೆಯಲು ಮತ್ತು ವಾಹನಗಳು ಫುಟ್ ಪಾತ್ ಮೇಲೆ ನುಗ್ಗಿ ಬಾರದಂತೆ ತಡೆಯುವ ಉದ್ದೇಶದಿಂದ ಹೊಸದಾಗಿ ನಿರ್ಮಿಸಲಾದ ಫುಟ್ಪಾತ್ ಹಲವೆಡೆ ಕೆಲವು ತಿಂಗಳುಗಳ ಹಿಂದೆ ರೇಲಿಂಗ್ಸ್ ಅಳವಡಿಸಲಾಗಿತ್ತು.
ಇದೀಗ ಅದರಲ್ಲಿ ಕೆಲವು ಕಿತ್ತುಹೋಗಿವೆ. ಇನ್ನು ಕೆಲವು ಮುರಿದುಬಿದ್ದಿದೆ. ವಾಹನಗಳು ಢಿಕ್ಕಿ ಹೊಡೆದಿರುವುದರಿಂದ ಕೆಲವು ರೇಲಿಂಗ್ಸ್‌ಗಳಿಗೆ ಹಾನಿಯಾಗಿದೆ. ಇನ್ನು ಕೆಲವು ರೇಲಿಂಗ್ಸ್‌ಗಳು ವೆಲ್ಡಿಂಗ್ ಮಾಡಿದ ಸ್ಥಳದಿಂದಲೇ ಕಿತ್ತುಬಂದಿವೆ. ಬಿದ್ದಿರುವ ಸರಳುಗಳು ಪಾದಚಾರಿಗಳ ಕಾಲಿಗೆ ಸಿಲುಕುವ ಅಪಾಯ ಉಂಟಾಗಿದೆ.

