ಮಂಗಳೂರು: ರಾಜ್ಯ ಸರಕಾರ ಪಂಚ ಗ್ಯಾರಂಟಿ ಜಾರಿಗೆ ತಂದ ಮೇಲೆ ರಾಜ್ಯದ ಜನರ ತಲಾದಾಯ 2,4,605 ರೂ. ವೃದ್ಧಿ ಆಗಿದೆ. ಇದನ್ನು ಲೋಕಸಭೆಯಲ್ಲಿ ಹಣಕಾಸು ಸಚಿವರು ಲಿಖಿತವಾಗಿ ಹೇಳಿದ್ದಾರೆ.

ಈಗ ಹೇಳಿ ಜನ ಎಲ್ಲಿ ಬರ್ಬಾದ್ ಆಗಿದ್ದಾರೆ, ಛಲವಾದಿ ನಾರಾಯಣಸ್ವಾಮಿ, ಆರ್ ಅಶೋಕ್ ಇವರೆಲ್ಲ ಯಾಕೆ ಮಾತಾಡ್ತಿಲ್ಲ? ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಹೀಗಿದ್ದರೂ ನೀವು ಪಂಚ ಗ್ಯಾರಂಟಿಯನ್ನು ಟೀಕಿಸುತ್ತೀರಲ್ಲ?” ಎಂದು ವಿಧಾನ ಪರಿಷತ್ ಶಾಸಕ ಹೈವನ್ ಡಿಸೋಜಾ ಹೇಳಿದರು. ಕಾಂಗ್ರೆಸ್ ನಾಯಕ ಪ್ರಕಾಶ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.