ಮಂಗಳೂರು: ಮೃತಪಟ್ಟ ಕೂಲಿ ಕಾರ್ಮಿಕನ ಹೆಣವನ್ನು ರಸ್ತೆ ಬದಿ ಮಾಲೀಕ ಮಲಗಿಸಿ ಹೋದ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ಚಿಕ್ಕಮೂಡ್ನೂರು ಗ್ರಾಮದ ಸಾಲ್ಮರದ ಶಿವಪ್ಪ(70 ) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಘಟನೆ ನಡೆದಿದ್ದು, ಸಾಲ್ಮರ ತಾವ್ರೋ ಇಂಡಸ್ಟ್ರೀಸ್ ಗಾರೆ ಕೆಲಸಕ್ಕೆ ಸಂಸ್ಥೆಯ ಮಾಲಕ ಹೆನ್ರಿ ಕರೆಸಿಕೊಂಡಿದ್ದನು. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಪ್ಪ ಮೃತಪಟ್ಟಿದ್ದಾನೆ.

ಪ

ಶಿವಪ್ಪನ ಸಾವಿನ ಬಗ್ಗೆ ಮನೆಯವರಿಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಆಸ್ಪತ್ರೆಗೂ ಕೊಂಡೊಯ್ಯದ ಹಿನ್ನಲೆ ಹಲವು ಅನುಮಾನ ಉಂಟಿಕೊಂಡಿದೆ. ಮೃತದೇಹವನ್ನ ಪಿಕ್ ಅಪ್ ನಲ್ಲಿ ತಂದು ಮನೆಯ ಪಕ್ಕದಲ್ಲೇ ಇರಿಸಿ ಹೋಗಿ ಅಮಾನವೀಯತೆ ಕೃತ್ಯ ಮೆರೆದಿದ್ದಾರೆ.

ಮನೆಯ ಪಕ್ಕದಲ್ಲೇ ಹೆಣ ಇರಿಸಿದರೂ ಕುಟುಂಬದವರಿಗೆ ಮಾಹಿತಿ ನೀಡಿಲ್ಲ. ರಸ್ತೆ ಬದಿ ಶಿವಪ್ಪ ಮೃತ ದೇಹವನ್ನು ಮಗಳು ಹಾಗು ಪತ್ನಿ ಗಮನಿಸಿದ್ದಾರೆ. ಹಲವು ಅನುಮಾನಗಳಿಗೆ ಈ ಘಟನೆ ಎಡೆ ಮಾಡಿಕೊಟ್ಟಿದೆ.

ಮ (2)

ಘಟನೆ ಬೆನ್ನಲ್ಲೇ ದಲಿತ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ದೌಡಾಯಿಸಿದ್ದು, ಈಗಾಗಲೇ ಆರೋಪಿ ಹೆನ್ರಿ ತಲೆ ಮರೆಸಿಕೊಂಡಿದ್ದಾರೆ. ಮಾಲೀಕನನ್ನ ಬಂಧಿಸುವಂತೆ ದಲಿತ ಸಂಘಟನೆಗಳ ಒತ್ತಾಯ ಮಾಡಿದೆ. ಇಂದು ಸಂಜೆಯೊಳಗೆ ಬಂಧಿಸದೇ ಇದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.