ಮಂಗಳೂರು : ಹಿಂದೂ ಸಮಾಜಕ್ಕೆ ಎದುರಾಗಿರುವ ಸಮಸ್ಯೆಗಳಿಂದ ಪಾರು ಮಾಡಬಲ್ಲ ಏಕೈಕ ಶಕ್ತಿಯೇ ನಮ್ಮೊಳಗಿನ ಶ್ರದ್ಧೆಯಾಗಿದೆ. ಮತಾಂತರ, ಲವ್ ಜಿಹಾದ್ ವಿಚಾರಗಳನ್ನ ಬಿಟ್ಟು ಬಿಡಿ. ಮತಾಂತರವಾದವರನ್ನ ಮತ್ತೆ ಘರ್ ವಾಪಸಿ ಹೇಗೆ ಮಾಡೋದಂತ ನಮ್ಮ ಯುವಕರನ್ನ ತರಬೇತುಗೊಳಿಸಿ. ಹುಡುಗಿ ಸಿಕ್ಕಿಲ್ಲವೆನ್ನುವ ಹಿಂದೂ ಯುವಕರು ಅನ್ಯ ಧರ್ಮೀಯ ಹುಡುಗಿಯರನ್ನ ಪ್ರೀತಿಸಿ ಮದುವೆಯಾಗಿ. ಸವಾಲುಗಳನ್ನ ಎದುರಿಸಬೇಕೆಂದರೆ ಇನ್ನು ಅಗ್ರೆಸಿವ್ ಆಗಿ ಹೋದರೆ ಸಾಲದು. ಟೆಸ್ಟ್ ಮ್ಯಾಚ್ ನಿಂತೋಗಿದೆ, ಇರೋದೇ ಇಪ್ಪತ್ತು ಓವರ್, ಅದರಲ್ಲಿ ಬಡಿಯಬೇಕಷ್ಟೆ ಎಂದು ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹಿಂದೂ ಸಮಾಜದ ಯುವಕರಿಗೆ ಕರೆ ನೀಡಿದರು.
ಹಿಂದೂ ಸಮಾಜದ ಐಕ್ಯತೆ, ಲೋಕ ಕಲ್ಯಾಣಾರ್ಥ ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ಐದನೇ ವರುಷದ “ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ” ಬೃಹತ್ ಪಾದಾಯಾತ್ರೆಯ ಸಮಾರೋಪ ಸಭೆಯಲ್ಲಿ ಅವರು ದಿಕ್ಕೂಚಿ ಭಾಷಣಗೈದರು.
ಒಂದು ಕ್ಷಣಕ್ಕೋಸರ ಲಕೋಪಾದಿಯಲ್ಲಿ ಒಟ್ಟು ಸೇರುವಂತಹ ಸಮಾಜ ನಮ್ಮದಾಗಿದೆ. ಉತ್ತರ ಪ್ರದೇಶದಲ್ಲಿ ಹದಿನೈದು ವರುಷದ ಹಿಂದೆ ಹಿಂದೂಗಳು ರಸ್ತೆಯಲ್ಲಿ ನಡೆದಾಡಲೂ ನಾಚಿಕೆ ಪಡುವಂತಿತ್ತು. ಬಳಿಕ ಅಲ್ಲಿ ಹಿಂದುತ್ವದ ಆಂದೋಲನ ಶುರುವಾಗಿ ಯೋಗಿ ಆದಿತ್ಯನಾಥರು ಆಡಳಿತ ಚುಕ್ಕಾಣಿ ಹಿಡಿದ ನಂತರ ಅಲ್ಲಿನ ಹಿಂದೂಗಳ ಸ್ಥಿತಿ ಹೇಗಿದೆ ನೋಡಿ.
2013ರ ಪವಿತ್ರ ಕುಂಭಮೇಳದ ಉಸ್ತುವಾರಿಯಾಗಿ ಅಂದಿನ ಸರಕಾರ ಆಜಮ್ ಖಾನನ್ನ ನೇಮಿಸಿತ್ತು. ಮುಸಲ್ಮಾನನ ಉಸ್ತುವಾರಿಗಿಂತ ಓರ್ವ ಹಿಂದೂ ಯೋಗಿಯ ಉಸ್ತುವಾರಿಯಲ್ಲಿ ನಡೆಯುವ ಕುಂಭಮೇಳವು ಯಾವ ರೀತಿಯ ಯಶಸ್ಸು ಕಾಣಬಹುದೆಂಬುದನ್ನ ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್ ತೋರಿಸಿಕೊಟ್ಟಿದ್ದಾರೆ.
ಬಾಂಗ್ಲಾ ದೇಶದ ಪ್ರಭಾವಕ್ಕೊಳಗಾಗಿ ಇಡೀ ಅಸ್ಸಾಮನ್ನು ಭಾರತ ಕಳಕೊಂಡರೂ ಆಶ್ಚರ್ಯ ಪಡಬೇಕಿಲ್ಲ. ಆದರೆ ಅಸ್ಸಾಮಲ್ಲಿ ಹಿಂದೂ ಪರ ಆಡಳಿತ ಬಂದ ಮೇಲೆ ಬಾಂಗ್ಲಾದೇಶದ ನುಸಳುಕೋರರನ್ನ ಹುಡುಕಿ ಹೊರದಬ್ಬುವ ಕಾರ್ಯ ಪ್ರಖರವಾಗಿ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಹಿಂದೂಗಳು ಬದುಕಲು ಕಷ್ಟಕರ ಸ್ಥಿತಿಯಿದ್ದು, ಆ ರಾಜ್ಯವನ್ನ ನಾವು ಕಳಕೊಳ್ಳುವ ಭೀತಿ ಎದುರಾಗಿದೆ ಎಂದರು.

