ಮಂಗಳೂರು : ಪ್ರದೀಪ್ ಕುಮಾರ್ (48) ಎಂಬವರು ಎಪ್ರಿಲ್ 8 ರಂದು ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೆ ಇದ್ದು ಕಾಣೆಯಾಗಿರುವ ಬಗ್ಗೆ ಪ್ರಕರಣ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದವರ ಚಹರೆ: ಎತ್ತರ ಸುಮಾರು 5.8 ಅಡಿ, ಗೋಧಿ ಮೈಬಣ್ಣ, ಕಪ್ಪು ಕೂದಲು, (ತಲೆಯ ನೆತ್ತಿಯ ಮೇಲೆ ಕೂದಲು ಇರುವುದಿಲ್ಲ), ದಪ್ಪ ಶರೀರ, ಕನ್ನಡ, ಹಿಂದಿ, ಇಂಗ್ಲಿಷ್, ತುಳು ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

View this post on Instagram

A post shared by News Karnataka (@newskarnataka)