ಮಂಗಳೂರು : ರಾಜ್ಯದಲ್ಲಿ 18 ರಿಂದ 20 ಲಕ್ಷದಷ್ಟು ಇರುವ ಕುಲಾಲ/ಕುಂಬಾರರ ದೇಶದಲ್ಲಿ 9 ಕೋಟಿ ಹೆಚ್ಚು ಜನಸಂಖ್ಯೆ ಇರುವ ಕುಲಾಲ/ಕುಂಬಾರ ಜನಾಂಗಕ್ಕೆ ರಾಜ್ಯದಲ್ಲಿ ಇಲ್ಲಿಯವರೆಗೆ ಲಕ್ಷ್ಮೀಸಾಗರ ಒಬ್ಬರಿಗೆ ಬಿಟ್ಟರೆ ಬೇರೆ ಯಾರಿಗೂ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ.

ಇದು ಕುಲಾಲ ಕುಂಬಾರರ ಸಮಾಜಕ್ಕೆ ಅತಿ ದೊಡ್ಡ ಅನ್ಯಾಯ ಇದನ್ನೆಲ್ಲಾ ರಾಜಕೀಯ ಪಕ್ಷದ ಮುಖಂಡರು ನಮ್ಮ ಸಮಾಜ ಜನಸಂಖ್ಯೆಯನ್ನು ಪರಿಗಣಿಸಿ ಆಯಾ ರಾಜಕೀಯ ಪಕ್ಷದಲ್ಲಿರುವ ಕುಲಾಲ/ಕುಂಬಾರಾರನ್ನು ಪರಿಗಣಿಸಿ ಗೌರವದ ಸ್ಥಾನಮಾನವನ್ನು ನೀಡಬೇಕಾಗಿ ಒತ್ತಾಯಿಸುತ್ತಿದ್ದೇವೆ.

ಮುಂದೆ ನಡೆಯುವ ತಾಲೂಕು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕೂಡಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಮ್ಮನ್ನು ಪರಿಗಣಿಸಬೇಕು. ಅಂತೆಯೇ ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸಂಸತ್ ಚುನಾವಣೆಯಲ್ಲೂ ಕುಲಾಲ/ಕುಂಬಾರರಿಗೆ ಸೂಕ್ತ ಸ್ಥಾನ ಮಾನ ನೀಡಬೇಕಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ.

ದೇವರಾಜು ಅರಸು ನಿಗಮದಲ್ಲಿ 103 ಜಾತಿಗಳನ್ನು ಸೇರಿದ 600 ರಿಂದ 700 ಕೋಟಿ ಅನುದಾನ ಕೊಡುತ್ತಿರುವ ಕರ್ನಾಟಕ ಸರ್ಕಾರ ಇಲ್ಲಿಯವರೆಗೆ ಕುಂಬಾರ ಕುಲಾಲರಿಗೆ ಸಿಕ್ಕಿರುವ ಸವಲತ್ತು ನೋಡಿದರೆ. ಏನೇನೂ ಸಾಲದು ಈಗಲಾದರೂ ಕರ್ನಾಟಕ ಸರ್ಕಾರ ಪ್ರಾಮಾಣಿಕ ಕುಲಾಲ/ ಕುಂಬಾರರನ್ನು ಪರಿಗಣಿಸಿ ಕುಂಬಾರರ ಅಭಿವೃದ್ಧಿ ನಿಗಮವನ್ನು ಮೂಲ ಭೂತ ಸೌಕರ್ಯ ಸೌಲಭ್ಯದೊಂದಿಗೆ ಸ್ಥಾಪಿಸಿ ಅದರ ಒಟ್ಟಿಗೆ 250 ಕೋಟಿ ಅನುದಾನವನ್ನು ಮೀಸಲಿಟ್ಟು ಸಮಾಜದ ಬಡ ವರ್ಗದವರನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಪಡಿಸಬೇಕಾಗಿ ವಿನಯಪೂರ್ವಕವಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಸಂಘಟಕರಾದ ಸದಾಶಿವ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.