ಮಂಗಳೂರು: ಶಿಷ್ಟಾಚಾರದ ಹೆಸರಿನಲ್ಲಿ ದಸರಾದ ಹಲವು ಆಚರಣೆಗಳಿಗೆ ಅಡೆತಡೆಯಾಗಿದ್ದು, ಸರಕಾರಕ್ಕೆ ರಾಜಮಾತೆ ಪ್ರಮೋದದೇವಿ ಪತ್ರ ಬರೆದ ವಿಚಾರವಾಗಿ ಮಂಗಳೂರಿನಲ್ಲಿ ಎಂ ಎಲ್ ಸಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಮೈಸೂರು ರಾಜಮನೆತನದ ಬಗ್ಗೆ ವಿಶೇಷವಾದ ಗೌರವವಿದೆ. ಮಹಾರಾಣಿ ತಮ್ಮ ಒಡವೆ ಕೊಟ್ಟು ಕನ್ನಂಬಾಡಿ ಆಣೆಕಟ್ಟು ಪೂರ್ಣಗೊಳಿಸಿದ್ದಾರೆ. ಮೈಸೂರನ್ನ ಬ್ರಾಂಡ್ ಆಗಿ ಮಾಡಿದವರು ರಾಜಮನೆತನದವರು. ಕಾಂಗ್ರೆಸ್ ನವರು ಅವರ ಕುಟುಂಬಕ್ಕಿರುವ ಗೌರವವನ್ನು ಅರ್ಥ ಮಾಡಿಕೊಂಡು ಮಾತನಾಡಿ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಾಗ ಒಂದು ಒಪ್ಪಂದವಾಗಿತ್ತು. ರಾಜಮನೆತನಕ್ಕೆ ಗೌರವ ಕೊಡುವುದು ಒಪ್ಪಂದದ ಭಾಗವಾಗಿತ್ತು ಎಂದರು.
ಪ್ರಜಾಪ್ರಭುತ್ವ ಇದೆ ಆದರೆ ನಾವು ಯಾರು ರಾಜರಲ್ಲ. ರಾಜರಿಗೆ ಇರುವ ಗೌರವನ್ನ ನಾವ್ಯಾರು ಉಳಿಸಿಕೊಂಡಿಲ್ಲ. ಅವರು ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದವಾದಿಯಾಗಿದ್ರು, ಇವರು ಪ್ರಜಾಪ್ರಭುತ್ವದಲ್ಲಿ ರಾಜರ ತರಹ ಮೆರೆಯುತ್ತಿದ್ದಾರೆ. ಸಹಾನುಭೂತಿಯಿಂದ ಅವರ ಅಹವಾಲು ಕೇಳಬೇಕು. ಸರಕಾರದ ಆಯೋಜನೆ ಮಾಡೋ ದಸರಾಕ್ಕೆ ಯಾವತ್ತೂ ವಿರೋಧ ಮಾಡಿಲ್ಲ ಎಂದರು.
ದೇಶದ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಖಾಸಗಿ ವಿಮಾನವನ್ನ ದೇಶದ ಗೃಹ ಸಚಿವರಿಗೆ ನೀಡಿದ್ರು, ನಮ್ಮ ಮೈಸೂರು ಮಹಾರಾಜರು ಅತ್ಯಂತ ವಿಶೇಷ ಗೌರವಕ್ಕೆ ಭಾಜನರಾದವರು. ಆ ಗೌರವವನ್ನು ಉಳಿಸಬೇಕಿದೆ ಎಂದರು.

