ಕೊಣಾಜೆ: ಪಜೀರು ಗ್ರಾಮದ ಅಡ್ಕ ಎಂಬಲ್ಲಿಯ ತನ್ನ ಮನೆಯಿಂದ ಗೆಳೆಯರೊಂದಿಗೆ ಜಾತ್ರೆಗೆಂದು ತೆರಳಿದ್ದ ಬಾಲಕಿಯೊರ್ವಳು ನಾಪತ್ತೆಯಾಗಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಲುಕ್ ಔಟ್ ನೋಟಿಸ್‌ ಜಾರಿ ಮಾಡಿದ್ದಾರೆ.

ಪಜೀರು ಅಡ್ಕದ ಜಗದೀಶ್ ಎಂಬವರ ಪುತ್ರಿ ಚೈತನ್ಯ (16) ಎಂಬಾಕೆ ನಾಪತ್ತೆಯಾದ ಬಾಲಕಿ. ಈಕೆ ಹರೇಕಳ ರಾಮಕೃಷ್ಣ ಹೈಸ್ಕೂಲ್ ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದು ಪರೀಕ್ಷೆ ಮುಗಿಸಿ ಮನೆಯಲ್ಲಿ ಇದ್ದಳು.

ಎ.12 ರಂದು ಬೆಳಿಗ್ಗೆ ಮನೆಯಲ್ಲಿ ಗೆಳೆಯರೊಂದಿಗೆ ಪೊಳಲಿ ಜಾತ್ರೆಗೆಂದು ತೆರಳಿದ್ದು, ಬಳಿಕ ರಾತ್ರಿಯವರೆಗೂ ಮನೆಗೆ ಬಾರದೆ ಇದ್ದುದರಿಂದ ಮನೆಯವರು ಆತಂಕಗೊಂಡು ಗೆಳೆಯರು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ. ಬಳಿಕ ಮನೆಯವರು ಕೊಣಾಜೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

View this post on Instagram

A post shared by News Karnataka (@newskarnataka)