ಮಂಗಳೂರು:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪವೊಂದು ಬೆಳಕಿಗೆ ಬಂದಿದೆ.
ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರನ್ನು ಚುನಾವಣಾ ಆಯೋಗದ ದಾಖಲೆಗಳಲ್ಲಿ ತಪ್ಪಾಗಿ ‘ಮೃತ’ ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿಯಾಗಿರುವ ಡೊನಾಲ್ಡ್ ಜೋಸೆಫ್ ರೇಗೊ, ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ.
ಬಳಿಕ ಪರಿಶೀಲಿಸಿದಾಗ, ಅವರ ಹೆಸರನ್ನು Absent, Shifted, Duplicate, Dead and Others – ASDDO ಪಟ್ಟಿಯಲ್ಲಿರುವ ‘ಮೃತ’ ವಿಭಾಗಕ್ಕೆ ಸೇರಿಸಿರುವುದು ತಿಳಿದುಬಂದಿದೆ.
ಜೀವಂತವಾಗಿರುವ ಮತದಾರನನ್ನೇ ಮೃತ ಎಂದು ಗುರುತಿಸಿರುವುದು ಇದೀಗ ಚುನಾವಣಾ ಆಯೋಗದ ಮತದಾರರ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

