ಮಂಗಳೂರು: ಚುನಾವಣೆಗಾಗಿ ಹಣ ಕಲೆಕ್ಷನ್ ಮಾಡಿರುವುದು ಬಿಜೆಪಿಯವರು. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ  ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಹಾರ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಕೆ ಆರೋಪಕ್ಕೆ ಮುಖ್ಯಮಂತ್ರಿ ಪುತ್ತೂರಿಮಲ್ಲಿ ಪ್ರತಿಕ್ರಿಯೆ ನೀಡಿದರು. ಸರಕಾರಿ ಸ್ಥಳಗಳಲ್ಲಿ ಆರ್‌ಎಸ್ಎಸ್ ಚಟುವಟಿಕೆ ಬ್ಯಾನ್ ವಿಚಾರವಾಗಿ ಮಾತನಾಡಿ, ಜಗದೀಶ್ ಶೆಟ್ಟರ್ ಅವರು 2013ರಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರು.

ಶಿಕ್ಷಣ ಇಲಾಖೆ ಮುಖಾಂತರ ಈ ಸುತ್ತೋಲೆ ಹೊರಡಿಸಲಾಗಿತ್ತು. ಮತ್ತೆಬಯಾಕೆ ಸುತ್ತೋಲೆ ಹೊರಡಿಸಿದ್ದು?.‌ ನಾವು ಯಾವುದೇ ಆರ್ಗನೈಸೇಷನ್ ಹೆಸರು ಹೇಳಿಲ್ಲ.‌ನಾವು ಆರ್ ಎಸ್ ಎಸ್ ಹೆಸರನ್ನು ಹೇಳಿಲ್ಲ. ಆದರೆ ಅವರು ಮಾಡಿರುವ ಕಾನೂನನ್ನು ಹೇಳಿದ್ದೇವೆ ಅಷ್ಟೇ ಎಂದರು.

ಜಗದೀಶ್ ಶೆಟ್ಟರ್ ನಿನ್ನೆ ಹೇಳಿದ್ದಾರೆ ಅದು ಶಿಕ್ಷಣ ಇಲಾಖೆ ಮಾಡಿದ್ದೆಂದು. ಹಾಗಾದರೆ ಅವರು ಆಗ ಮುಖ್ಯಮಂತ್ರಿ ಆಗಿರ್ಲಿಲ್ವೇ?.  ನಾವು ಹೇಳಿರೋದು ಪರ್ಮಿಷನ್ ತಕ್ಕೊಂಡು ಮಾಡಲಿ. ಪರ್ಮಿಷನ್ ಕೊಡಲೇಬೇಕು ಎಂದೇನಿಲ್ಲ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.