ಮಂಗಳೂರು: ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಎಸ್ ಟಿ ಪಿ ಐ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದರು.
ಮಾಧ್ಯಮ ಗೋಷ್ಠಿಯಲ್ಲಿ ಶರಣ್ ಪಂಪ್ವೆಲ್ ಮಾತನಾಡಿ ಬಂಟ್ವಾಳದ ಗೂಡಿನ ಬಳಿ ಎಂಬಲ್ಲಿನ ಉರುಸ್ ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಮುಖಂಡ ಭಾಷಣ ಮಾಡಿದ್ದಾರೆ. ಗೋಮಾಂಸ ತಿನ್ನುವುದು ನಮ್ಮ ಹಕ್ಕು ಎಂದು ಹೇಳಿದ್ದಾನೆ. ಇದನ್ನು ಪ್ರಶ್ನೆ ಮಾಡಿ ಇಲ್ಲಿಗೆ ಯಾರಾದರೂ ಬಂದರೆ ಕೈಕಟ್ಟಿಕೊಂಡು ಕೂರಬೇಡಿ ಎಂದರು.
ನಿಮ್ಮದೇ ರೀತಿಯಲ್ಲಿ ಅದಕ್ಕೆ ಉತ್ತರ ಕೊಡಿ ಎಂದು ಸಂಘರ್ಷಕ್ಕೆ ಪ್ರಚೋದಿಸಿದ್ದಾನೆ. ಗೋ ಹತ್ಯೆ ನಿಷೇಧ ಕಾನೂನು ರಾಜ್ಯದಲ್ಲಿ ಜಾರಿಯಲ್ಲಿದೆ. ಅದನ್ನು ಮೀರಿ ನಾವು ತಿಂದೆ ತಿಂತೀವಿ ಅಂತಾದ್ರೆ ಅದನ್ನು ಕಾನೂನಾತ್ಮಕ ವಾಗಿ ತಡೆಯುವ ಹಕ್ಕು ನಮಗಿದೆ. ಪ್ರಚೋದನಾತ್ಮಕ ಹೇಳಿಕೆ ನೀಡಿದ ಎಸ್ ಡಿ ಪಿ ಐ ಮುಖಂಡನ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಮಂಗಳೂರಿನಲ್ಲಿ ವಿ ಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದರು.

