ಮಂಗಳೂರು: ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ʻಕೆಎಂಸಿ ಆಸ್ಪತ್ರೆʼಯು ವಿಯೆಟ್ನಾಂ ಮೂಲದ ಬಾಣಸಿಗರೊಬ್ಬನಿಗೆ ಯಶಸ್ವಿಯಾಗಿ ಹೃದಯ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸಿದೆ. 19 ಸದಸ್ಯರನ್ನು ಒಳಗೊಂಡ ಹಡಗೊಂದರ ಸಿಬ್ಬಂದಿಯಾಗಿದ್ದ 39 ವರ್ಷದ ವಿಯಟ್ನಾಂ ಮೂಲದ ಬಾಣಸಿಗನಿಗೆ ಹಡಗು ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ ಸ್ವಲ್ಪ ಸಮಯದಲ್ಲೇ ಹೃದಯಾಘಾತ ಸಂಭವಿಸಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಅವರನ್ನು ಮರುದಿನ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ದುರದೃಷ್ಟವಶಾತ್, ರೋಗಿಯು ರಾತ್ರಿವೇಳೆ ಮತ್ತೆ ರಕ್ತದ ಹರಿವಿನ ಸಮಸ್ಯೆಗೆ(ಮರು-ಇನ್‌ಫ್ರಾಕ್ಷನ್‌) ತುತ್ತಾಗಿದ್ದರಿಂದ ಅವರಿಗೆ ತುರ್ತು ರಕ್ಷಣಾ ಆಂಜಿಯೋಪ್ಲಾಸ್ಟಿ ಮಾಡಬೇಕಾದ ಅಗತ್ಯ ಏರ್ಪಟ್ಟಿತು. ಕೆಎಂಸಿ ಆಸ್ಪತ್ರೆಯ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಪದ್ಮನಾಭ ಕಾಮತ್ ನೇತೃತ್ವದ ವಿಶೇಷ ವೈದ್ಯಕೀಯ ತಂಡವು ಡಾ.ಐಶ್ವರ್ಯಾ ಮತ್ತು ಡಾ.ಲಾವಣ್ಯ ಸೇರಿದಂತೆ ನುರಿತ ಅರಿವಳಿಕೆ ತಂಡದೊಂದಿಗೆ ತುರ್ತು ಕಾರ್ಯವಿಧಾನವನ್ನು ಅತ್ಯಂತ ಪರಿಣಿತಿಯಿಂದ ನಿರ್ವಹಿಸಿತು.

“ನಾವು ಎದುರಿಸಿದ ಪರಿಸ್ಥಿತಿ ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ನಮ್ಮ ತಂಡದ ತ್ವರಿತ ಕ್ರಮ ಹಾಗೂ ʻಕೆಎಂಸಿʼ ಆಸ್ಪತ್ರೆಯಲ್ಲಿರುವ ಸುಧಾರಿತ ಸೌಲಭ್ಯಗಳ ನೆರವಿನಿಂದ ನಾವು ರೋಗಿಯ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಯಶಸ್ವಿಯಾಗಿ ಆಂಜಿಯೋಪ್ಲಾಸ್ಟಿ ನಡೆಸಲು ಸಾಧ್ಯವಾಯಿತು. ರೋಗಿಯು ಈಗ ಅಪಾಯದಿಂದ ಪಾರಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ,ʼʼ ಎಂದು ಡಾ. ಪದ್ಮನಾಭ ಕಾಮತ್ ತಿಳಿಸಿದರು. ರೋಗಿಯ ಉತ್ತಮ ಆರೈಕೆಯನ್ನು ಖಾತರಿಪಡಿಸಲು ಹಾಗೂ ಅಗತ್ಯವಾದ ಶಾಸನಬದ್ಧ ಅನುಸರಣೆಯನ್ನು ಸುಗಮಗೊಳಿಸಲು ʻಇಟಿಎ ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ʼ ಪಾಲುದಾರರಾದ ಶ್ರೀ ಸಾಯಿ ಶರಣ್ ಕೊಟ್ಟಾರಿ ನೀಡಿದ ಅದ್ಭುತ ಬೆಂಬಲವನ್ನು ಅವರು ಶ್ಲಾಘಿಸಿದರು. ನವಮಂಗಳೂರು ಬಂದರು, ವಲಸೆ, ಕಸ್ಟಮ್ಸ್ ಮತ್ತು ಆರೋಗ್ಯ ಅಧಿಕಾರಿಗಳು; ಡಾ. ಪುತ್ರನ್ ಮತ್ತು ಡಾ. ಆಶಿತ್ ಡಿ ಶೆಟ್ಟಿಯನ್ ಅವರ ಬೆಂಬಲಕ್ಕೂ ಅವರು ಧನ್ಯವಾದ ಅರ್ಪಿಸಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಸಿಓಓ ಸಗೀರ್ ಸಿದ್ದಿಕಿ ಮಾತನಾಡಿ, ” ಅಂತರರಾಷ್ಟ್ರೀಯ ರೋಗಿಗಳಿಗೆ ಹಾಗೂ ಮಂಗಳೂರಿನ ವೈದ್ಯಕೀಯ ವ್ಯವಸ್ಥೆಯು ತುರ್ತುಸ್ಥಿತಿಗಳನ್ನು ನಿಬಾಯಿಸಲು ಮಂಗಳೂರಿನ ಆರೋಗ್ಯ ವ್ಯವಸ್ಥೆಯ ಸನ್ನದ್ಧವಾಗಿದೆ ಹಾಗೂ ಸಾಮರ್ಥ್ಯವಾಗಿದೆ ಎಂದು ಬಿಂಬಿಸುತ್ತದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು, ಅತ್ಯಂತ ನುರಿತ ವೃತ್ತಿಪರರು ಹಾಗೂ ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಗಳಿಗೆ ಸುಲಭ ಪ್ರವೇಶದ ಮೂಲಕ ಆಯಕಟ್ಟಿನ ಸ್ಥಳದಲ್ಲಿರುವ ಮಂಗಳೂರು ಅತ್ಯಂತ ವೇಗವಾಗಿ ಆರೋಗ್ಯ ಪ್ರವಾಸೋದ್ಯಮದ ಜಾಗತಿಕ ಕೇಂದ್ರವಾಗಿ ಬದಲಾಗುತ್ತಿದೆ,ʼʼ ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, “ವಿದೇಶ ಪ್ರವಾಸದ ವೇಳೆ ಬೇರೆ ದೇಶದ ಪ್ರಜೆಯೊಬ್ಬರು ಹೃದಯಾಘಾತಕ್ಕೆ ಒಳಗಾದಾಗ, ಸಮಯೋಚಿತ ವೈದ್ಯಕೀಯ ಮಧ್ಯಸ್ಥಿಕೆ ಮತ್ತು ಸಮನ್ವಯವು ನಿರ್ಣಾಯಕವಾಗಿದೆ. ಭಾಷಾ ಅಡೆತಡೆಗಳನ್ನು ನಿಭಾಯಿಸುವುದು, ವಿಮಾ ಸೌಲಭ್ಯದ ಪರಿಶೀಲನೆ ಹಾಗೂ ರೋಗಿಯ ವೈದ್ಯಕೀಯ ದಾಖಲೆಗಳ ನಿಖರ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವುದು ಮುಂತಾದವು ಈ ಸವಾಲುಗಳಲ್ಲಿ ಸೇರಿವೆ. ಕೆಎಂಸಿ ಆಸ್ಪತ್ರೆಯಲ್ಲಿ ವಿಯೆಟ್ನಾಂ ರೋಗಿಯ ಯಶಸ್ವಿ ಚಿಕಿತ್ಸೆಯು ಅಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ನಗರದ ದಕ್ಷತೆ ಮತ್ತು ಸನ್ನದ್ಧತೆಯನ್ನು ಸೂಚಿಸಿತ್ತದೆ, ಅಂತರರಾಷ್ಟ್ರೀಯ ಆರೋಗ್ಯ ರಕ್ಷಣೆಗೆ ಆದ್ಯತೆಯ ತಾಣವಾಗಿ ನಗರದ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಿಶ್ವದರ್ಜೆಯ ಆರೈಕೆಯನ್ನು ಒದಗಿಸುವ ಕೆಎಂಸಿ ಆಸ್ಪತ್ರೆಯ ಬದ್ಧತೆಯು ಪ್ರಪಂಚದಾದ್ಯಂತದ ರೋಗಿಗಳನ್ನು ಆಕರ್ಷಿಸುತ್ತಿದೆ, ಇದು ಆರೋಗ್ಯ ಪ್ರವಾಸೋದ್ಯಮದಲ್ಲಿ ಶ್ರೇಷ್ಠತೆಯ ಉಜ್ವಲ ಉದಾಹರಣೆಯಾಗಿದೆ,ʼʼ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಗಳ ಬಗ್ಗೆ
ಆರೋಗ್ಯ ರಕ್ಷಣೆ ಕ್ಷೇತ್ರದ ಪ್ರವರ್ತಕ ಸಂಸ್ಥೆಯಾಗಿರುವ ʻಮಣಿಪಾಲ್ ಹಾಸ್ಪಿಟಲ್ಸ್‌ʼ, ವಾರ್ಷಿಕವಾಗಿ 7 ದಶಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಭಾರತದ ಅತ್ಯುನ್ನತ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಒಂದೆನಿಸಿದೆ. ತನ್ನ ಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಆರೈಕೆ ವಿತರಣಾ ಜಾಲದ ಮೂಲಕ ಕೈಗೆಟುಕುವ, ಉತ್ತಮ-ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಅದನ್ನು ಆಸ್ಪತ್ರೆಯ ಹೊರಗಿನ ಆರೈಕೆಗೆ ವಿಸ್ತರಿಸುವುದರತ್ತ ಸಂಸ್ಥೆಯು ಗಮನ ಹರಿಸುತ್ತದೆ. ʻಮೆಡಿಕಾ ಸಿನರ್ಜಿ ಹಾಸ್ಪಿಟಲ್ಸ್ʼ ಮತ್ತು ʻಎಎಂಆರ್‌ಐ ಹಾಸ್ಪಿಟಲ್ಸ್ ಲಿಮಿಟೆಡ್ʼ (ಸೆಪ್ಟೆಂಬರ್ 2023 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ) ಸ್ವಾಧೀನ ಪೂರ್ಣಗೊಂಡ ನಂತರ, ಮಣಿಪಾಲ್‌ ಹಾಸ್ಪಿಟಲ್ಸ್‌ನ ಸಂಯೋಜಿತ ಜಾಲವು ಇಂದು 19ನಗರಗಳಲ್ಲಿ 10,500+ ಹಾಸಿಗೆಗಳು ಮತ್ತು 5,600+ ಪ್ರತಿಭಾವಂತ ವೈದ್ಯರ ಪಡೆ ಹಾಗೂ 18,600 ಕ್ಕೂ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯವನ್ನು ಹೊಂದಿರುವ 37 ಆಸ್ಪತ್ರೆಗಳ ಪ್ಯಾನ್-ಇಂಡಿಯಾ ಹೆಜ್ಜೆಗುರುತನ್ನು ಹೊಂದಿದೆ.

ಮಣಿಪಾಲ್ ಆಸ್ಪತ್ರೆಗಳು ಪ್ರಪಂಚದಾದ್ಯಂತದ ಅನೇಕ ರೋಗಿಗಳಿಗೆ ಸಮಗ್ರ ಉಪಶಮನ ಮತ್ತು ರೋಗತಡೆ ಆರೈಕೆಯನ್ನು ಒದಗಿಸುತ್ತವೆ. ಮಣಿಪಾಲ್ ಹಾಸ್ಪಿಟಲ್ಸ್ ʻಎನ್ಎಬಿಎಚ್ʼ, ಮತ್ತು ʻಎಎಎಚ್ಆರ್‌ಪಿʼ ಮಾನ್ಯತೆಯನ್ನು ಪಡೆದಿದೆ ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು ʻಎನ್ಎಬಿಎಲ್ʼ, ʻಇಆರ್ʼ ಮತ್ತು ʻಬ್ಲಡ್ ಬ್ಯಾಂಕ್ʼ ಮಾನ್ಯತೆ ಪಡೆದಿವೆ ಮತ್ತು ನರ್ಸಿಂಗ್ ಉತ್ಕೃಷ್ಟತೆಗಾಗಿಯೂ ಮಾನ್ಯತೆ ಪಡೆದಿವೆ. ವಿವಿಧ ಗ್ರಾಹಕ ಸಮೀಕ್ಷೆಗಳ ಮೂಲಕ ಮಣಿಪಾಲ್ ಹಾಸ್ಪಿಟಲ್ಸ್‌ ಭಾರತದ ಅತ್ಯಂತ ಗೌರವಾನ್ವಿತ ಮತ್ತು ರೋಗಿ-ಶಿಫಾರಸು ಮಾಡಿದ ಆಸ್ಪತ್ರೆಯಾಗಿ ಗುರುತಿಸಲ್ಪಟ್ಟಿದೆ.