ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೃತ್ಯ ಮಾಡಿದವರನ್ನು ತಪ್ಪಿಸಿಕೊಳ್ಳದಂತೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಯಸುತ್ತೇನೆ ಎಂದು ಮಂಗಳೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.
ಯಾರನ್ನು ಕೂಡ ಕೊಲ್ಲುವ ಅಧಿಕಾರ ಯಾರಿಗೂ ಕೊಡಲಿಲ್ಲ. ಎಲ್ಲರನ್ನು ಪತ್ತೆಹಚ್ಚಿ ಇಂತಹ ಕೃತ್ಯ ಮುಂದೆ ಆಗದಂತೆ ಮಾಡುವ ಕೆಲಸ ಆಗಬೇಕು. ಫಾಜಿಲ್ ಕುಟುಂಬದ ಸಮರ್ಥನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಬಗ್ಗೆ ಜಿಲ್ಲೆಯವರಿಗೆ, ಕ್ಷೇತ್ರದ ಜನರಿಗೆ ಗೊತ್ತಿರುವ ವಿಚಾರ. ಅಂದಿನ ವಾತಾವರಣದಲ್ಲಿ ಉದ್ವಿಗ್ನ ಸ್ಥಿತಿ ಕಡಿಮೆಯಾಗಬೇಕೆಂದು ಸತ್ಯವನ್ನು ಹೇಳಿದ್ದೇನೆ ಎಂದರು.
ನನಗೆ ಸಿಕ್ಕಿದ ಮಾಹಿತಿಯನ್ನು ನನ್ನ ಕ್ಷೇತ್ರದ ಜನರಿಗೆ ಹೇಳಿದ್ದೇನೆ. ಪೊಲೀಸರು ಆರೋಪಿಗಳನ್ನು ಹಿಡಿದ ನಂತರ ತಿಳಿಯುತ್ತದೆ ಎಂದು ಹೇಳಿದ್ದೆ. ಗೊತ್ತಾದ ಮಾಹಿತಿ ಗೌಪ್ಯವಾಗಿಡದೆ ಸತ್ಯವನ್ನು ಹೇಳಿದ್ದೇನೆ, ಪೊಲೀಸರು ಯಾವುದೇ ಅಡಚಣೆ ಇಲ್ಲದೆ ಬಂಧನ ಮಾಡಿದ್ದಾರೆ. ಅದರಲ್ಲಿ ನನ್ನ ಪಾತ್ರ ಇಲ್ಲ ಎಂದು ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಕ್ಷೇತ್ರದ ಜನರು, ಧಾರ್ಮಿಕ ಮುಖಂಡರು ನನ್ನ ಪರವಾಗಿದ್ದಾರೆ. ಟೀಕೆ ಮಾಡೋರು ಮಾಡುತ್ತಾರೆ, ಅದನ್ನು ರಾಜಕೀಯವಾಗಿ ತಗೊಳ್ಳಲ್ಲ. ಅವರವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ, ಇವರ ಆರೋಪವನ್ನು ಯಾರು ನಂಬುತ್ತಾರೆ ಅಂತ ಮುಖ್ಯ. ನನ್ನ ವ್ಯಕ್ತಿತ್ವ ತಿಳಿದವರು ಏನೂ ಅನ್ಕೊಳಲ್ಲ, ಜನರು ವಿಶ್ವಾಸ ಇಟ್ಟಿದ್ದಾರೆ.
ಕ್ರಿಕೆಟ್ ಮ್ಯಾಚ್ ಗೆ ಎಲ್ಲರೂ ಆಹ್ವಾನಿಸುತ್ತಾರೆ, ಅಲ್ಲಿಗೆ ಹೋಗಲೂ ಇಲ್ಲ. ಕಳಸದ ಮಹಮ್ಮದ್ ಮುಸ್ತಫಾ ಕ್ರಿಕೆಟ್ ಮ್ಯಾಚ್ ಆಹ್ವಾನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಇವತ್ತು ಕೃತ್ಯ ಮಾಡಿದ್ದಾರೋ ಕಠಿಣ ಶಿಕ್ಷೆ ಆಗಬೇಕು. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ಇರಬೇಕು, ರಾಜಕೀಯ ಮುಖ್ಯ ಅಲ್ಲ. ಆಡಳಿತ, ಪ್ರತಿ ಪಕ್ಷ ಇದೆ, ಎನ್ಐಎ ತನಿಖೆ ಮಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ನಾನು ಯಾಕೆ ಎನ್ಐಎ ತನಿಖೆಗೆ ಆಕ್ಷೇಪ ಮಾಡಬೇಕು. ಇದರ ಕಾರಣಕ್ಕೆ ಸಮಾಜದಲ್ಲಿ ಶಾಂತಿಗೆ ತೊಂದರೆ ಆಗಬಾರದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

