ಮಂಗಳೂರು : ಫಾರಂ ನಂಬರ್ 7 ದುರುಪಯೋಗಕ್ಕೆ ಸಂಬಂಧಿಸಿ ಪೊಲೀಸರು ಕ್ರಮ ಕೈಗೊಳ್ಳದಂತೆ ಬಿಜೆಪಿ ಮುಖಂಡರು ಎಚ್ಚರಿಕೆ ನೀಡುತ್ತಿದ್ದು ಠಾಣೆಗೆ ನುಗ್ಗುವುದಾಗಿಯೂ ಹೇಳಿದ್ದಾರೆ.‌ ಕಾನೂನುಬಾಹಿರ ಕೆಲಸ ಮಾಡುವವರನ್ನು ರಕ್ಷಿಸುವುದು, ಪೊಲೀಸ್ ಠಾಣೆಗೆ ನುಗ್ಗುವುದೇ ಬಿಜೆಪಿ ಸಂಸ್ಕೃತಿ ಎಂದು ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಟೀಕಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಕಟ್ಟೆಯಲ್ಲಿ‌ 66 ಕ್ರೈಸ್ತ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ.‌ ಇಂಥ ಅಕ್ರಮ ನಡೆದಿದ್ದರೆ ಕಾನೂನು ಪ್ರಕಾರ ಒಬ್ಬನೇ ನೈಜ ಮತದಾರನ‌ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತದೆ.

ಆದರೆ ದೊಡ್ಡವರೆಂದು ಹೇಳಿಕೊಳ್ಳುವವರು, ರಾಜ್ಯಭಾರ ಮಾಡಿದವರು ಮಾಡುತ್ತಿರುವ ಕೆಲಸ ಏನು? ನಿಮಗೆ ರಾಜಕೀಯದಲ್ಲಿ ಮುಂದುವರಿಯುವ ನೈತಿಕತೆ ಇದೆಯೇ? ಮಾಜಿ ಮುಖ್ಯಮಂತ್ರಿಯವರೇ ಪೊಲೀಸ್ ಠಾಣೆಗೆ ನುಗ್ಗುವ ಮಾತು ಹೇಳುವುದಾದರೆ ನಿಮಗೆ ಕನಿಷ್ಠ ಜ್ಞಾನ ಇಲ್ಲವೇ? ಎಂದು ಹರಿಹಾಯ್ದರು.