ಮಂಗಳೂರು : ಬಿಸಿರೋಡ್ ಚಲೋ ಪ್ರತಿಭಟನೆ ಬಳಿಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ನಾವು ಹತ್ಯೆಯನ್ನು ಪ್ರತಿಪಾದನೆ ಮಾಡೋದಿಲ್ಲ. ಯಾವುದೇ ಸಂಬಂಧ ಇಲ್ಲದ ಭರತ್ ಹಾಗು ಇತರರನ್ನ ಕೇಸ್ ಹಾಕಿ ಜೈಲಿಗೆ ಹಾಕಿದ್ರು, ಗೂಂಡಾ ಕಾಯ್ದೆ ಹಾಕಿದ್ರು, ಇದು ಯಾವ ಸಂವಿಧಾನ ಹೇಳಿದ ಕಾನೂನು ಎಂದರು.
ಭರತ್ ಕುಮ್ದೇಲ್ ಬಂಧನವಾದ ಬಳಿಕ ಭರತ್ ಮನೆಯಲ್ಲಿ ಊಟಕ್ಕೆ ಕಷ್ಟವಾಗಿತ್ತು. ಭರತ್ನ ಮಗುವಿಗೆ ಅನಾರೋಗ್ಯ ಎಂದು ರಿಕ್ಷಾದಲ್ಲಿ ಕರೆದುಕೊಂಡು ಹೋದ್ರು, ಆ ರಿಕ್ಷಾದವನ ಮೇಲೆ ಕೇಸ್ ಹಾಕಿದ್ರು, ಎಂತಹ ಪಾಪಿಗಳು ಇವರು. ಭರತ್ ಕುಟುಂಬಸ್ಥರು ಸಹಕಾರ ಕೇಳಿದ್ರೆ, ಸಹಕಾರ ಕೊಟ್ಟವರ ಮೇಲೆ ಕೇಸ್. ಕಾನೂನು ಬಿಟ್ಟು ಗೃಹ ಮಂತ್ರಿಗಳು ಹೇಳ್ತಾರೆ ಮುಖ್ಯಮಂತ್ರಿ ಹೇಳ್ತಾರೆ ಎಂದು ಕೇಸ್ ಹಾಕೋದಲ್ಲ ಎಂದರು.
ಚೇಲಾಗಳ ಹಾಗೆ ಕೆಲಸ ಮಾಡೋದಲ್ಲ. ಕೇಸ್ ಹಾಕಿ ನಾವೆಲ್ಲಾ ಇದನ್ನ ನೋಡಿ ಆಗಿದೆ. ನನ್ನ ಮೇಲೆ ಕೇಸ್ ಹಾಕೋಕೆ ಹೊರಟಿದ್ದಾರೆ. ಇದು ನನಗೆ ದೊಡ್ಡ ವಿಷಯ ಅಲ್ಲ. ಈ ಕೇಸ್ ನನ್ನ ಕೂದಲಿಗೆ ಸಮ. ನಾನು ಯಾರ ಹತ್ರ ಬೇಕಾದರೂ ಫೋನ್ ನಲ್ಲಿ ಮಾತನಾಡುತ್ತೇನೆ. ನನಗೆ ಅಂಬೇಡ್ಕರ್ ಕೊಟ್ಟ ಸಂವಿಧಾನ. ಭರತ್ ಜೊತೆ ನಾನು ಫೋನ್ ನಲ್ಲಿ ಮಾತನಾಡಿದ್ದೇನೆ ಎಂದರು.
ನಾನು ಭರತ್ ಕುಮ್ದೇಲ್ ಗೆ ಯಾರಿಗಾದರೂ ಹೊಡಿ ಅಂತಾ ಹೇಳಿದ್ದಿನಾ, ಕೊಲ್ಲು ಅಂತಾ ಹೇಳಿದ್ದೇನಾ?. ಅ ರೀತಿಯ ಸಂಭಾಷಣೆ ಅವರಿಗೆ ಸಿಕ್ಕಿದ್ಯಾ ಪೊಲೀಸರಿಗೆ. ಪೊಲೀಸರ ಈ ರೀತಿಯ ಹುಚ್ಚು ಸ್ವಲ್ಪ ಇಳಿಯಬೇಕು ಎಂದರು.

