ಮಂಗಳೂರು : ಬಿ.ಸಿ.ರೋಡ್ ಚಲೋ ಪ್ರತಿಭಟನೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇದು ಆಶೀರ್ವಚನ ಕೇಳುವ ಸಮಯ ಅಲ್ಲ, ಇದು ಪ್ರತಿಭಟಿಸೋ ಸಮಯ. ಪೊಲೀಸ್ ವರಿಷ್ಠಾಧಿಕಾರಿಯವರೇ ನೀವು ದಕ್ಷರು ಅಂತ ಬಂದಿದ್ದೀರಲ್ಲ, ನಿಮ್ಮ ಹೆಸರಿನ ಮೊದಲು ಡಾಕ್ಟರ್ ಇದೆಯಲ್ವಾ? ನೀವು ಮೊದಲು ನಮ್ಮ ಡಾಕ್ಟರ್ ನೋಡಿ ಕಲೀರಿ, ಕೋಕಾ ಕಾಯಿದೆ ನ್ಯಾಯಾಲಯದಲ್ಲಿ ಬಿದ್ದು ಹೋಗಿದೆ, ಆದರೆ ಈಗ ಗೂಂಡಾ ಕಾಯಿದೆ ಎಂದರು.
ಜಾಮೀನು ಸಿಗಬಾರದು ಅನ್ನೋದು ನಿಮ್ಮ ನಿಲುವು, ಈಗ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತ ಸಂಘಟನೆಗೆ ಬದ್ದ. ನಿಮಗೆ ರಾಜಕೀಯ ಹೋಗಲು ಮನಸ್ಸಿದ್ರೆ ಹೋಗಿ, ಎಲ್ಲರೂ ಸಕ್ಸಸ್ ಆಗಲ್ಲ. ಹಿಂದುತ್ವದ ಶಕ್ತಿ ಕೇಂದ್ರ ಈ ಭಾಗವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇವತ್ತು ನೀವು ಭರತ್ ಕುಮ್ಡೇಲು ಅಲೆದಾಡಿಸಿದ್ರಿ, ಆದರೆ ನಮ್ಮ ಸರ್ಕಾರ ಬಂದ ಮೇಲೆ ನಿಮ್ಮನ್ನು ಅಲೆದಾಡಿಸ್ತೇವೆ ಎಂದರು.
ಪ್ರಭಾಕರ ಭಟ್ ರ ಹಿಂದೆ ಇಡೀ ಹಿಂದೂ ಸಮಾಜ ಇದೆ. ನಮಗೆ ನೂರು ಡಾಕ್ಟರ್ ಇಲ್ಲ, ನಮಗೆ ಇರೋದು ಒಬ್ಬರೇ ಡಾಕ್ಟರ್, ಡಾಕ್ಟರ್ ಗೆ ಕಿರುಕುಳ ಕೊಡಲು ಹೇಳಿದ ಆ ಚೇಲಾ ಯಾರು?. ಅಷ್ಟು ತಾಕತ್ತಿರೋ ಸಮಾಜದ ಮುಖಂಡನಿಗೆ ಕಿರುಕುಳ ನೀಡಬೇಡಿ. ಹಿಂದೂ ಸಮಾಜದ ಚಿಕಿತ್ಸಕ ಕಲ್ಕಡ್ಕ ಪ್ರಭಾಕರ ಭಟ್ ರಿಗೆ ಕಿರುಕುಳ ಬೇಡಿ. ಬಂಟ್ವಾಳದ ಹತ್ಯೆಯನ್ನು ನಾವು ಸಮರ್ಥಿಸುವುದಿಲ್ಲ, ಯಾರೋ ನಾಲ್ಕೈದು ಮಂದಿ ರೋಷಧಿದಿಂದ ಮಾಡಿರಬಹುದು ಎಂದರು.
ಎಲ್ಲರ ಮನೆಯ ನೋವು ಒಂದೇ, ನಾವು ಆ ಹತ್ಯೆ ಸಮರ್ಥಿಸಲ್ಲ, ಹಿಂದೂ ಸಮಾಜವನ್ನು ಗಟ್ಟಿ ಮಾಡಬೇಕು, ಸದೃಢ ಮಾಡಬೇಕಿದೆ. ಯಾರೋ ಒಬ್ಬ ಮೂರ್ಖ ಹೇಳಿದ್ದಾನಂತೆ ಭರತ್ ಕುಮ್ಡೇಲು ಹಣೆಗೆ ಗುಂಡು ಹೊಡೀರಿ ಅಂತ. ಆ ಮತಾಂಧನಿಗೆ ಈ ಮೂಲಕ ಎಚ್ಚರಿಕೆ ನೀಡ್ಡೇವೆ. ಭಜರಂಗದಳ, ವಿಎಚ್ ಪಿ ಎಲ್ಲವೂ ಹಿಂದೂ ಸಮಾಜದ ಅಸ್ಮಿತೆ. ಅವರು ಸಮಾಜಕ್ಕಾಗಿ ದುಡಿಯುವವರು, ಅವರು ಸಮಾಜದ ಜೊತೆ ಇರೋರು. ನೀವು ಒಬ್ಬ ಭರತ್ ಕುಮ್ಡೇಲು ಬಂಧಿಸಿದ್ರೆ ಸಾವಿರಾರು ಕುಮ್ಡೇಲು ಹುಟ್ತಾರೆ. ಭರತ್ ನನ್ನ ನಿಯಂತ್ರಣ ಮಾಡಲು ಹೋಗಬೇಡಿ, ಗೂಂಡಾ ಕಾಯಿದೆ ಹಿಂಪಡೆಯಿರಿ ಎಂದರು.

