ಮಂಗಳೂರು : ರಾಜ್ಯದ ಮುಖ್ಯಮಂತ್ರಿ ೧೬ ರಂದು ಮಂಗಳೂರಿಗೆ ಆಗಮಿಸಿ ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮದಲ್ಲಿ‌ ಭಾಗಿಯಾಗಲಿದ್ದಾರೆ. ಉರ್ವದಲ್ಲಿ ನಿರ್ಮಾಣ ಆದ ೩೦ ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ಮಾಡಲಿದ್ದಾರೆ.

೭೫ ಕೋಟಿ ಅನುದಾನದಲ್ಲಿ ಆದ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಮಾಡಲಿದ್ದು, ಬಳಿಕ ಉಲ್ಲಾಳದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ‌ಭಾಗವಹಿಸಲಿದ್ದಾರೆ ಎಂದು ಮಂಗಳೂರಿನಲ್ಲಿ ಎಂಎಲ್ಸಿ ಮಂಜುನಾಥ್ ಭಂಡಾರಿ ಹೇಳಿಕೆ ನೀಡಿದ್ದಾರೆ.

ಈ ಕಾಮಗಾರಿ ೨೦೧೬ ರಲ್ಲಿ ಆರಂಭವಾಗಲಿದ್ದು, ಸರ್ಕಾರ ಬದಲಾದ ಬಳಿಕ ಈ ಯೋಜನೆಗೆ ಸರ್ಕಾರ ಒತ್ತು‌ ನೀಡಿಲ್ಲ. ಈ ಯೋಜನೆಗೆ ಬಳಿಕ ಬಂದ ಸರ್ಕಾರ ಒಂದು ರೂಪಾಯಿ ಕೂಡಾ ನೀಡಿಲ್ಲ. ಭಾರತದಲ್ಲೇ ಅತೀ ದೊಡ್ಡ ಜಿಲ್ಲಾಧಿಕಾರಿ ಕಚೇರಿ ಇದಾಗಿದೆ. ಅರಣ್ಯ ಇಲಾಖೆಯಿಂದ ಈ‌ ಭೂಮಿಯನ್ನು ಮಾಜಿ ಸಚಿವ ರೈ ಅವರು ನೀಡಿದ್ರು.

೨೨ ಬೇರೆ ಬೇರೆ ಇಲಾಖೆಯ ಕಚೇರಿ ಈ ಕಟ್ಟಡದಲ್ಲಿ ಬರಲಿದೆ. ೮ ಸಾವಿರ ಫಲಾನುಭಾವಿಗಳಿಗೆ ಆರ್ಟಿಸಿ ಪತ್ರ ವಿತರಣೆ ಮಾಡಲಿದ್ದಾರೆ. ಮೂರು‌ ನಿಗಮದಿಂದ ವಿವಿಧ ಫಲಾನುಭಾವಿಗಳಿಗೆ ಯೋಜನೆ ವಿತರಣೆ ಮಾಡಲಿದ್ದಾರೆ.