ಮಂಗಳೂರು: ಮಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳು ಕಾಂಗ್ರೆಸ್ ನ ಪೊಲೀಸ್ ಠಾಣೆಗಳು. ಇವರು ಅಧಿಕಾರಿಗಳನ್ನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ತಾಳಕ್ಕೆ ಕುಣಿಯಲು. ಇವರ ತಾಳಕ್ಕೆ ಕುಣಿಯುವ ಅಧಿಕಾರಿಗಳನ್ನ ಇಲ್ಲಿ ಕಟ್ಟಬೇಕಿತ್ತು. ರಾತ್ರಿ ಹೊತ್ತು ಮನೆಗೆ ಹೋಗಲು ಯಾವ ಕಾನೂನಿನಲ್ಲಿ ಅವಕಾಶ ಇದೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ನಿಯೋಗದ ಸುದ್ದಿಗೋಷ್ಟಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಕಾನೂನಿನ ಪುಸ್ತಕದಲ್ಲಿ ಅವಕಾಶ ಇದ್ಯಾ ಅಂತ ಎಸ್ಪಿಗೆ ಪ್ರಶ್ನೆ ಮಾಡಿದ್ವಿ, ಪಾಕಿಸ್ತಾನದವರನ್ನ ಹೊರಗೆ ಕಳಿಸಿ ಅಂದ್ರೆ ಇವರಿಗೆ ಕಳಿಸಲು ಆಗಿಲ್ಲ. ಆದರೆ ಹಿಂದೂಗಳ ಮನೆಗೆ ಹೋಗಿ ತೊಂದರೆ ಕೊಡ್ತಾರೆ. ದೇಶಪ್ರೇಮಿಗಳು ಹಾಗೂ ದೇಶದ್ರೋಹಿಗಳ ಒಂದೇ ತಕ್ಕಡಿಯಲ್ಲಿ ತೂಗಬೇಡಿ ಅಂದಿದ್ದೇವೆ. ಇದೆಲ್ಲಾ ಬಹಳ ದಿನ ನಡೆಯಲ್ಲ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ಕಾರ ಯಾವಾಗ ಬೀಳುತ್ತೋ ಅನ್ನೋ ಗ್ಯಾರಂಟಿ ಇಲ್ಲ ಎಂದರು.
ಸುಹಾಸ್ ಹತ್ಯೆಯಲ್ಲಿ ಕೇರಳ ಮೂಲ, ಪಿಎಫ್ಐ ಕೈವಾಡ ಇದೆ. ಈಗ ಎನ್ಐಎ ಗೆ ನೀಡಲಾಗಿದೆ, ಇದರಿಂದ ಸತ್ಯಾಂಶ ಹೊರಗೆ ಬರಲಿದೆ. ಯಾರದ್ದೋ ಮಾತು ಕೇಳಿ ತಪ್ಪು ಮಾಡಿದ್ರೆ ಪಶ್ಚಾತ್ತಾಪ ಪಡ್ತೀರಾ ಅಂತ ಅಧಿಕಾರಿಗಳಿಗೆ ಹೇಳಿದ್ದೇವೆ. ಇದೇ ಲಾಸ್ಟ್, ನಾಳೆಯಿಂದ ಇದು ನಡೆಯಲ್ಲ ಅಂದಿದ್ದೇವೆ. ಬೆಂಗಳೂರಿನಲ್ಲಿ ವಿ ಆರ್ ವಿಥ್ ಪೊಲೀಸ್, ಆದರೆ ಮಂಗಳೂರಿನಲ್ಲಿ ವಿ ಆರ್ ನಾಟ್ ವಿತ್ ಪೊಲೀಸ್. ರಾಜಕೀಯ ಚಿತಾವಣೆಗೆ ತೊಂದರೆ ಕೊಟ್ಟರೆ ನಾವು ಬಿಡಲ್ಲ ಎಂದರು.
ಕಾರ್ಯಕರ್ತರ ಪರ ನಾವಿದ್ದೇವೆ, ಯಾವುದೇ ಕಾರ್ಯಕರ್ತ ಭಯ ಪಡಬೇಕಿಲ್ಲ. ರೌಡಿ ಎಂಬ ಪದಕ್ಕೆ ಬೇರೆ ಬೇರೆ ವ್ಯಾಖ್ಯಾನ ಇದೆ. ರಾಹುಲ್ ಗಾಂಧಿ ಮೇಲೆ 420 ಕೇಸ್ ಇದೆ, ಅವರನ್ನ 420 ಅನ್ನೋಕಾಗುತ್ತಾ, ನಾನು ಹಾಗೆ ಹೇಳಲ್ಲ. ಅದೆಲ್ಲಾ ಕೋರ್ಟ್ ತೀರ್ಮಾನ ಮಾಡುತ್ತೆ, ನಾವಲ್ಲ. ಡಿಕೆಶಿ ಮೇಲೆಯೂ ಕೇಸ್ ಇತ್ತು, ಅವರೂ ಜೈಲಿಗೆ ಹೋಗಿಲ್ಬಾ?, ಬೇರೆ ಕೇಸ್ ಕೂಡ ಎನ್ಐಎ ಗೆ ಕೊಡಲಿ, ನಾವು ಕೊಡಬೇಡಿ ಅಂದಿಲ್ಲ ಎಂದರು.
ಕೊಲೆಗೆ ಕೋಮು ಗಲಭೆ ಅನ್ನಬೇಡಿ, ಆ ಕೊಲೆಗೆ ಕಾರಣ ಹುಡುಗಿ. ಬಂಟ್ವಾಳ ಕೊಲೆಯ ಸರಿಯಾದ ಕಾರಣ ಹುಡುಕಿ, ಹಳ್ಳಿಗೆ ಹೋಗಿ ಕೇಳಿ ಅಂದಿದ್ದೇವೆ. ನಮ್ಮ ಪ್ರಕಾರ ಅದು ಕೋಮು ಕೊಲೆ ಅಲ್ಲ, ಅದು ಬೇರೆ ಕೊಲೆ. ಹರಿಪ್ರಸಾದ್ ಅವರ ದೃಷ್ಟಿಯಲ್ಲಿ ಎನ್ಐಎಗೆ ಕೊಡೋದು ಬೇಡ ಅಂತ ಇರಬಹುದು. ಹರಿಪ್ರಸಾದ್ ಎಷ್ಟು ಲೆವೆಲ್ ಲೀಡರ್ ಅಂತ ನನಗೆ ಗೊತ್ತಿಲ್ಲ.
ಆದರೆ ಡಿಸಿಎಂ ಕುಕ್ಕರ್ ಬಾಂಬ್ ಆರೋಪಿಯನ್ನ ಬ್ರದರ್ಸ್ ಅಂದ್ರು, ನೋಡಿದರೆ ಅವನು ಇಡೀ ದೇಶದಲ್ಲಿ ಬಾಂಬ್ ಇಡೋಕೆ ಹೊರಟಿದ್ದ. ದ.ಕ ಪೊಲೀಸರು ಇದೇ ರೀತಿ ಮುಂದುವರೆದ್ರೆ ಹೋರಾಟದ ರೂಪುರೇಷೆ ತಯಾರಾಗಿದೆ. ಇದರ ವಿರುದ್ದ ದೊಡ್ಡ ಆಂದೋಲನ ಮಾಡಲಿದ್ದೇವೆ. ಇದು ನಮ್ಮ ದೌರ್ಬಲ್ಯ ಅಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನಾವು ಹೊಣೆಯಲ್ಲ ಎಂದರು.

