ಮಂಗಳೂರು:  ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾಲೇಜಿನ ಅರುಪೆ ಸಭಾಂಗಣದಲ್ಲಿ ನಡೆಯಿತು.
Yoga (3)

ಕಾರ್ಯಕ್ರಮವನ್ನು ದೇಲಂಪಾಡಿ ಯೋಗ ಪ್ರತಿಷ್ಠಾನ, ಆವಿಷ್ಕಾರ್ ಯೋಗ, ಹಾಗೂ ಡೆಕತ್ಲಾನ್ ಇದರ ಸಹಭಾಗಿತ್ವದಲ್ಲಿ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೋಶ, ದೈಹಿಕ ಶಿಕ್ಷಣ ವಿಭಾಗ, ಎನ್‍ಸಿಸಿ, ಎನ್ ಎಸ್ ಎಸ್, ಯೂತ್ ರೆಡ್‍ಕ್ರಾಸ್ ಹಾಗೂ ಯೋಗ ತಂಡದ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಜತೆಯಾಗಿ ಆಯೋಜಿಸಿದ್ದರು.
Yoga (4)

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗತಜ್ನ ಕುಶಾಲಪ್ಪ ಗೌಡರು, ಯೋಗದಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಎಲ್ಲರೂ ದೈನಂದಿನ ಕಾರ್ಯಕ್ರಮಗಳೊಂದಿಗೆ ಯೋಗವನ್ನು ಜೋಡಿಸಿಕೊಳ್ಳಬೇಕೆಂದರು.
Yoga (6)

ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ನಿರ್ದೇಶಕಿ, ಶ್ರೀಮತಿ ನೀತಾ ಶೆಟ್ಟಿ ಅನೇಕ ಯೋಗಾಸನಗಳನ್ನು ಮಾಡುವುದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು. ಇವರೊಂದಿಗೆ ಕಾಲೇಜಿನ ಯೋಗ ವಿದ್ಯಾರ್ಥಿಗಳಾದ ರೋಶನಿ ಶೆಣೈ, ಸಾನ್ವಿ ಶೆಟ್ಟಿ ಹಾಗೂ ಸುಮೇಧಾ ಸಹಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂ. ಡಾ. ಪ್ರವೀಣ್ ಮಾರ್ಟಿಸ್ ವಹಿಸಿದ್ದರು. ತಮ್ಮ ಮಾತುಗಳ ಮೂಲಕ ಒತ್ತಡ ರಹಿತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದರು.
Yoga (5)

ಸಂತ ಅಲೋಶಿಯಸ್ ವಿ.ವಿ. ಯೋಗ ಶಿಕ್ಷಣದ ಬಗ್ಗೆಯೂ ಸಾಕಷ್ಟು ಮಹತ್ವವನ್ನು ನೀಡುತ್ತಿದೆ ಎಂದರು. ಕಾಲೇಜಿನ ರಿಜಿಸ್ಟ್ರಾರ್ ಡಾ. ಆಲ್ವಿನ್ ಡೇಸಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಸ್ಥೆಗಳ ಎನ್.ಸಿ.ಸಿ. ಕೆಡೆಟ್‍ಗಳು ಭಾಗವಹಿಸಿದ್ದರು. ಲೆಫ್ಟಿನೆಂಟ್ ಕರ್ನಲ್ ಗ್ರೇಶನ್ ಸಿಕ್ವೇರಾ, ಆಡಳಿತಾಧಿಕಾರಿ 18 ಕರ್ನಾಟಕ ಬೆಟಾಲಿಯನ್, ಮಂಗಳೂರು ಹಾಗೂ ವಿಂಗ್ ಕಮಾಂಡರ್ ಪ್ರವೀಣ್ ಬಿಶ್ನೋಯಿ, ಕಮಾಂಡಿಂಗ್ ಆಫೀಸರ್, 6 ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ., ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.
Yoga (7)

ಕಾರ್ಯಕ್ರಮದ ಸಂಯೋಜಕ ಡಾ. ಈಶ್ವರ ಭಟ್ ಎಲ್ಲರನ್ನೂ ಸ್ವಾಗತಿಸಿ, ಪ್ರಸ್ತಾವನೆಗೈದರು.  ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಅರುಣ್ ಡಿಸೋಜ ಅವರು ವಂದಿಸಿದರು. ರೋಶನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.
Yoga (8)