ಮಂಗಳೂರು : ಶ್ರೀ ಪರಂ ಜ್ಯೋತಿ ಭಜನಾ ಮಂಡಳಿ ಅಳಪೆ ಮಂಗಳೂರು ಇದ್ರ ವತಿಯಿಂದ 4 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಶಾ ಲತಾ, ಯೌಗೀಶ್ ಶೆಟ್ಟಿ ಜೆಪ್ಪು, ರತನ್ ಶೆಟ್ಟಿ,ಭಾಸ್ಕರ್ ಚಂದ್ರ ಶೆಟ್ಟಿ , ವಿಶ್ವನಾಥ್ ಬಲ್ಯ, ಜಯಂತಿ ವಿಶ್ವನಾಥ್, ಹೇಮಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್
ದಿನಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದೀಪ ಬೆಳಗಿಸಿ 4 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಶಿಕ್ಷಕಿ ಆಶಾ ಲತಾ ಅವರನ್ನ ಸನ್ಮಾನಿಸಲಾಯಿತು. ಬಳಿಕ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅತಿಥಿಗಳಲ್ಲಿ ಓರ್ವರಾದ ಯೌಗೀಶ್ ಶೆಟ್ಟಿ ಜೆಪ್ಪು ಶ್ರೀ ಪರಂ ಜ್ಯೋತಿ ಭಜನಾ ಮಂಡಳಿ ಮಾಡುತ್ತಿರುವ ವಿವಿಧ ಕಾರ್ಯಕ್ರಮಕ್ಕೆ ಸ್ಲಗ್ಗನೆ ವ್ಯಕ್ತ ಪಡಿಸಿದರು .
ಬಳಿಕ ಮುಖ್ಯ ಅತಿಥಿ ಆಶಾ ಲತಾ ಮಾತನಾಡಿ ತುಳುನಾಡಿನ ಸಂಸ್ಕೃತಿಯ ಬಗ್ಗೆ ನೆರೆದ ಸಭಿಕರಿಗೆ ವಿವರಿಸಿದರು. ಬಳಿಕ 25 ಹೆಚ್ಚಿನ ಬಗೆಯ ಆಟಿ ತಿಂಗಳಿನಲ್ಲಿ ತಯಾರಿಸುವ ವಿವಿಧ ಖಾದ್ಯಗಳನ್ನ ಸ್ವತಹ ಅವರವ ಮನೆಯಲ್ಲಿ ತಯಾರಿಸಿ ಎಲ್ಲರಿಗೂ ನೀಡಲಾಯಿತು.

