ಮಂಗಳೂರು : ರಾಜ್ಯ ಸಚಿವ ಸಂಪುಟ ಪುನಾರಚನೆ  ವಿಚಾರವಾಗಿ ಸಭಾಧ್ಯಕ್ಷ  ಯುಟಿ ಖಾದರ್‌ ಹೇಳಿಕೆ ನೀಡಿದ್ದು, ರಾಜಕೀಯವಾಗಿ ಏನು ನಡಿತಿದೆ ನಂಗೆ ಗೊತ್ತಿಲ್ಲ, ನಾನು ಆಲೋಚನೆ ಮಾಡಲು ಹೋಗಿಲ್ಲ ಎಂದರು.

ಡಿಸೆಂಬರ್ನಲ್ಲಿ ಅಧಿವೇಶನ ನಡೆಯಲಿದ್ದು, ಅದನ್ನ ಸೌಹಾರ್ತವಾಗಿ ನಡೆಸುವುದು ನನ್ನ ಉದ್ದೇಶ. ನಾನು ಈಗ ಸ್ಪೀಕರ್ ಆಗಿದ್ದೇನೆ ಆದ್ದರಿಂದ ಸಂವಿಧಾನಬದ್ದವಾಗಿ ಇದ್ದೇನೆ ಎಂದು ಮಾಧ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.