ಮಂಗಳೂರು : ಪ್ರಚೋದನಕಾರಿ ಭಾಷಣ ಮಾಡೋರನ್ನ ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿದೆ. ಅವರಿಗೆ ಲಾಯಾರ್ಸ್ ಕೊಡ್ತಾರೆ, ಜಡ್ಜಸ್ ಹತ್ತಿರ ಮಾತನಾಡಿಸ್ತಾರೆ. ಎಫ್ಐಆರ್ ಆದರೂ ಅವರಿಗೆ ಸುಲಭವಾಗಿ ಬೇಲ್ ಸಿಗ್ತಾ ಇದೆ ಎಂದು ಮಂಗಳೂರಿನ ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.
ಕೋಮು ಭಾಷಣಗಳನ್ನ ಹತ್ತಿಕ್ಕಲು ಒಂದು ಕಾನೂನು ರೂಪಿಸಬೇಕು. ಯತ್ನಾಳ್ ಹಾಗೂ ಈ ಜಿಲ್ಲೆಯ ಶಾಸಕರು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್ ಐ ಆರ್ ಆದರೂ ಕೂಡಲೇ ಬೇಲ್ ಆಗುತ್ತೆ. ಅವರ ಬಳಿ ಲಾಯರ್ ಇದೆ, ಜಡ್ಜ್ ಹತ್ರ ಮಾತನಾಡಿಸ್ತಾರೆ. ಈ ರೀತಿ ಕೇಸ್ ಆದರೂ ಅವರಿಗೆ ಸಂಘಟನೆಯ ಬೆಂಬಲ ಇದೆ, ರಾಜಕೀಯ ರಕ್ಷಣೆಯೂ ಇದೆ ಎಂದರು.

