ಮಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಮಂಗಳೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿಕೆ  ನೀಡಿದ್ದಾರೆ.

ಇಂದಿನ ಜಾತಿ ವ್ಯವಸ್ಥೆಯಲ್ಲಿ ಈ ರೀತಿಯ ಸಮೀಕ್ಷೆಗಳು ತುಂಬಾ ಅಗತ್ಯವಿದೆ. ಇಡೀ ರಾಜ್ಯದಲ್ಲಿ ಮಂಗಳೂರು, ಉಡುಪಿಯಲ್ಲಿ ಸಮೀಕ್ಷೆ ಸ್ವಲ್ಪ ನಿಧಾನಗತಿಯಾಗಿದೆ. ಕೆಲವರು ನಾವು ಮಾಡೋದೆ ಇಲ್ಲ‌ ಅಂತಾ ಹೇಳಿದ್ದಾರೆ. ಆದ್ರೆ ಮಾಡೋದೆ ಇಲ್ಲ ಅಂತಾ ಹೇಳೋದಕ್ಕೆ ಬರಲ್ಲ ಎಂದರು.

ಆದ್ರೆ ತಿರಸ್ಕರಿಸುವ ಅವಕಾಶ ಅದರಲ್ಲಿ ಇದೆ. ಬಿಜೆಪಿಯವರು ಸಮೀಕ್ಷೆ ಮಾಡಬೇಡಿ ಅಂತಾರೆ. ಜೋಷಿಯವರು,ತೇಜಸ್ವಿ ಸೂರ್ಯ,ವಿಜಯೇಂದ್ರ,ಆರ್.ಅಶೋಕ್ ಸಂವಿಧಾನದ ಮೇಲೆ ಪ್ರಮಾಣ ಮಾಡಿರ್ತಾರೆ. ಸುಪ್ರೀಂ ಕೋರ್ಟ್ ಸುಮೋಟೊ ಕೇಸ್ ಅವರ ಮೇಲೆ ಹಾಕಬೇಕು. ಸಮೀಕ್ಷೆಗೆ ಸಹಕರಿಸಬೇಡಿ ಅಂತಾ ಅವರು ಹೇಳಿದರು.

ನಾಳೆ ನರೇಂದ್ರ ಮೋದಿಯವರು ಮಾಡಿದ್ರೆ ಏನು‌ ಮಾಡ್ತೀರಿ ನೀವು‌. ಇದನ್ನು ತಿರಸ್ಕಾರ ಮಾಡ್ತೀರಾ ನೀವು. ಮಾತನಾಡುತ್ತಿರುವವರು ಯಾವ ವರ್ಗದವರು. ವಿರೋಧ ಪಕ್ಷದಲ್ಲಿ ಇದ್ದುಕೊಂಡು ಆ ಕೆಟ್ಟ ಚಾಳಿ ಬಿಡಬೇಕಾಗುತ್ತೆ ಎಂದರು.