ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಕ್ಟೋಬರ್ ಒಂದರಿಂದ ಹೊಸ ಸೇವಾದರ ಜಾರಿಗೆ ಬಂದಿದೆ. ಸೇವಾದರ ಏರಿಕೆ ಬಗ್ಗೆ ದೇಗುಲ ಪ್ರಕಟನೆ ಕೊಟ್ಟ ಬಳಿಕ ಕೆಲವರು ದರ ಇಳಿಸುವಂತೆ ಜನಪ್ರತಿನಿಧಿಗಳು, ದೇಗುಲದ ಆಡಳಿತ ಮಂಡಳಿಗೆ ಮನವಿ ನೀಡಿದ್ದರು.
ಇದರ ಪರಿಣಾಮ ಹೂವಿನ ಪೂಜೆ 200 ರೂ., ಕಾರ್ತಿಪೂಜೆ 20 ರೂ., ತೀರ್ಥಬಾಟಲಿ 10 ರೂ. ಹೀಗೆ ಕೆಲವು ಸೇವೆಗಳ ಏರಿದ ದರದಲ್ಲಿ ಕೊಂಚ ಇಳಿಕೆ ಮಾಡಿ ದರ ಜಾರಿಯಾಗಿದೆ.

