ಮಂಗಳೂರು : ಸಿದ್ದರಾಮಯ್ಯ ಹೆಚ್ಚು ಅವಧಿ ಸಿಎಂ ವಿಚಾರವಾಗಿ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಎಷ್ಟು ವರುಷ ಆಡಳಿತ ಮಾಡಿದ್ದಾರೆ ಎಂಬುವುದು ಮುಖ್ಯವಲ್ಲ , ಹೇಗೆ ಆಡಳಿತ ಮಾಡಿದ್ದಾರೆ ಎಂಬುವುದು ಮುಖ್ಯ ಎಂದರು.
ಕಳೆದ ಎರಡುವರೆ ವರ್ಷದಿಂದ ತುಳುನಾಡು ಕರಾವಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಅನುದಾನ ಬಿಡುಗಡೆ ಮಾಡದೇ ಅಧಿಕಾರದಲ್ಲಿ ಮೆರೆದರೆ ಏನು ಪ್ರಯೋಜನ. ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ನೀವು ನಿಮ್ಮಷ್ಟಕ್ಕೆ ನೀವು ಜಂಬ ಕೊಚ್ಚಿಕೊಂಡು ಕಾರ್ಯಕ್ರಮಗಳನ್ನ ಮಾಡಿಕೊಂಡು, ನಿಮ್ಮ ಬೆನನ್ನ ನೀವೇ ತಟ್ಟಿಕೊಳ್ಳುತಿದ್ದಿರಿ ಎಂದರು.
ಕರಾವಳಿಗೆ ಒಂದು ರುಪೈ ಅನುದಾನ ಕೊಡದೆ, ದಾಖಲೆ ಮಾಡಿದ್ದು ಯಾವ ಪ್ರಯೋಜನ, ಊಟಕ್ಕೆ ಇಲ್ಲದ ಉಪ್ಪಿನಕಾಯಿ, ಕೇವಲ ಪುಸ್ತಕದ ದಾಖಲೆಗೆ ಮಾತ್ರ ಸೀಮಿತ ಎಂದು ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

