ಮಂಗಳೂರು: ರಾಜ್ಯದಲ್ಲಿ ಮತ್ತೆ ಹಿಜಾಬ್ ಗೆ ಅವಕಾಶ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಕಿಡಿಕಾರಿದರು.
ಶಾಲಾ ಕಾಲೇಜುಗಳಲ್ಲಿ ಸಮಾನತೆಗಾಗಿ ಬಿಜೆಪಿ ಸರ್ಕಾರ ಹಿಜಾಬ್ ನ್ನು ನಿಷೇಧಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಹಿಜಾಬ್ ಗೆ ಅವಕಾಶ ನೀಡಿದೆ. ಇದೊಂದು ಧರ್ಮದ ಓಲೈಕೆ ರಾಜಕಾರಣ. ಓಟ್ ಬ್ಯಾಂಕ್ ಗಾಗಿ ಕಾಂಗ್ರೇಸ್ ಸರ್ಕಾರ ಈ ಆದೇಶ ಮಾಡಿದೆ ಎಂದರು.
ಮುಂದೆ ಶಾಲಾ ಕಾಲೇಜುಗಳಿಗೆ ಕೇಸರಿ ಶಾಲ್ ಹಾಕಿಕೊಂಡು ವಿದ್ಯಾರ್ಥಿಗಳು ಬರ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ವಿಎಚ್ ಪಿ ಬಜರಂಗದಳ ಸಂಪೂರ್ಣ ಬೆಂಬಲ ನೀಡುತ್ತೆ. ಶಾಲಾಕಾಲೇಜುಗಳಲ್ಲಿ ಸಂಘರ್ಷ ಆದ್ರೆ ರಾಜ್ಯ ಸರ್ಕಾರವೇ ಹೊಣೆ. ಹೀಗಾಗಿ ಹಿಜಾಬ್ ಅವಕಾಶ ನೀಡಿದ್ದನ್ನ ರಾಜ್ಯ ಸರ್ಕಾರ ವಾಪಾಸ್ಸು ಪಡೆಯಲಿ ಎಂದರು.

