ಮಂಗಳೂರು : ನೆಲ್ಲಿದಡಿಗುತ್ತು ದೈವದ ಆಚರಣೆ ಅಡ್ಡಿ ವಿಚಾರವಾಗಿ ಶರಣ್ ಪಂಪವೆಲ್ ಹೇಳಿಕೆ ನೀಡಿದ್ದಾರೆ. ಎಸ್ಇಝಡ್ ನಡಿ ಇರುವ ನೆಲ್ಲಿದಡಿ ಗುತ್ತು ದೈವಸ್ಥಾನ ಜಾಗ. ಆ ಕುಟುಂಬದ ಆರಾಧನೆಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಆ ದೇವಸ್ಥಾನದ ಐದುವರೆ ಎಕರೆ ಭೂಮಿ ಕುಟುಂಬಕ್ಕೆ ನೀಡಬೇಕು ಎಂದರು.
ಕೇಂದ್ರ ಸರ್ಕಾರಕ್ಕೆ ಇದಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡ್ತೇವೆ. ನೆಲ್ಲಿದಡಿ ಗುತ್ತು ಹೋರಾಟ ಸಮಿತಿಯೊಂದಿಗೆ ವಿಎಚ್ಫಿ ಎಂದೂ ಇರುತ್ತೆ. ಮುಂದಿನ ಹೋರಾಟದಲ್ಲಿ ನೆಲ್ಲಿದಡಿ ಗುತ್ತಿವಿನ ಹೋರಾಟ ಸಮಿತಿಯೊಂದಿಗೆ ವಿಎಚ್ಪಿ ಇರಲಿದೆ. ಈ ಕುರಿತು ಎಸ್ಇಝಡ್ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಲಿ ಎಂದರು.
ಅದು ಬಿಟ್ಟು ಸಂಘರ್ಷಕ್ಕೆ ಅವಕಾಶ ಮಾಡಿ ಕೊಡಬೇಡಿ. ತುಳುವರ ಮೂಲ ಶಕ್ತಿಯಾಗಿದೆ ದೈವಾರಾಧನೆ. ತುಳುವರ ನಂಬಿಕೆಗೆ ನೋವು ಉಂಟು ಮಾಡಿದ್ರೆ ತುಳುನಾಡಿನ ಜನತೆ ಸುಮ್ಮನಿರಲ್ಲ ಎಂದು ಶರಣ್ ಪಂಪವೆಲ್ಲ್ ಹೇಳಿಕೆ ನೀಡಿದ್ದಾರೆ.

