ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೆಪ್ಟೆಂಬರ್ 04 ಮತ್ತು 05 ರಂದು ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಸಂಪನ್ನಗೊಂಡಿತು. ಸೆಪ್ಟೆಂಬರ್ 04 ರಂದು ಪ್ರಾತಃಕಾಲ 6:00 ರಿಂದ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಬೆಳಿಗ್ಗೆ 7:30ಕ್ಕೆ ಶ್ರೀಗಣಪತಿ ಹವನ ನಂತರ ಮಹಾಪೂಜೆ ಜರುಗಿತು.

ನಂತರ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ಹಾಗೂ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮಹಾಪೂಜೆ ನಡೆಯಿತು. ಅಂದು ಸಂಜೆ 5ಗಂಟೆಯಿಂದ 8ರವರೆಗೆ ಶ್ರೀ ಸುಧಾಕರ್ ಕೋಟೆ ಕುಂಜತ್ತಾಯ ಕಾಸರಗೋಡು ಇವರ ತಂಡದಿಂದ ಭಕ್ತ ಸುಧಾಮ ಎಂಬ ಹರಿಕಥಾ ಸತ್ಸಂಗ ನಡೆಯಿತು.

ರಾತ್ರಿ 8ಗಂಟೆಯಿಂದ 11-30ರ ತನಕ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ರಾತ್ರಿ 11:30ಕ್ಕೆ ವಿಶೇಷ ಆಲಂಕಾರ ಪೂಜೆ ನೆರವೇರಿತು. ಶ್ರೀಕೃಷ್ಣಜನ್ಮಾಷ್ಟಮಿಯ ಸಮಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ಅರ್ಘ್ಯ ಪ್ರಧಾನ ನೆರವೇರಿತು. ಈ ಸಂದರ್ಭದಲ್ಲಿ ನಗರದ ಅನೇಕ ಭಕ್ತಾದಿಗಳು ಈ ಅರ್ಘ್ಯಪ್ರಧಾನ ಸೇವೆಯಲ್ಲಿ ಭಾಗವಹಿಸಿದರು.

ಸೆಪ್ಟೆಂಬರ್ 05 ರಂದು ಪ್ರಾತಃಕಾಲ 6 ಗಂಟೆಗೆ ಶ್ರೀದೇವರಿಗೆ ಪಂಚಾಮೃತಾಭಿಷೇಕ , ಬೆಳಿಗ್ಗೆ 7:30ಕ್ಕೆ ಗಣಪತಿ ಹವನ ನಡೆದು ಬೆಳಗ್ಗೆ 8.30ರಿಂದ ನಿರಂತರ ಲಕ್ಷ ತುಳಸಿ ಅರ್ಚನೆಯು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು. ಮಧ್ಯಾಹ್ನ 12:30 ಕ್ಕೆ ಶ್ರೀ ದೇವರ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಿತು.

ಊರ ಪರವೂರ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನಾಯಕ್ , ಮೊಕ್ತೇಸರರಾದ ಶ್ರೀಮತಿ ಸಗುಣಾ .ಸಿ. ನಾಯಕ್, ಸಂಜೀತ್ ನಾಯಕ್, ಅಂಜು ಆಳ್ವ ನಾಯಕ್, ಗೌರವ ಸಲಹೆಗಾರರಾದ ಅನಂತಕೃಷ್ಣ ಭಟ್‌ರವರು ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.