ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಮಯ 2022 ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಸನಾತನ ನಾಟ್ಯಾಲಯ ಮಂಗಳೂರಿನ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿಯವರು ನೆರವೇರಿಸಿದರು.
1k7a5539 800x533

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ಶೆಟ್ಟಿಯವರು ಶ್ರೀಕೃಷ್ಣನ ಮಹಿಮೆಯ ಕುರಿತಂತೆ ತಿಳಿಸಿದರು. ನಾವು ನಮ್ಮ ಜೀವನದಲ್ಲಿ ಅನೇಕ ಸಂಸ್ಕಾರಯುತ ಅಭ್ಯಾಸವನ್ನು ಮಾಡಬೇಕಾಗಿದೆ ನಾವು ಸಣ್ಣ ಸಣ್ಣ ವಿಷಯಗಳಾದ ನಮ್ಮ ತಂದೆ ತಾಯಿಗೆ ಗೌರವವನ್ನು ಕೊಡುವುದು ಅನ್ನವನ್ನು ತಟ್ಟೆಯಲ್ಲಿ ಉಳಿಸದೆ ಪೂರ್ಣ ಊಟ ಮಾಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿ ಜೀವನದಲ್ಲಿಯೇ ಸಂಸ್ಕಾರವನ್ನು ಪಡೆಯಬೇಕು. ಇಂತಹ ಸಂಸ್ಕಾರವು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
1k7a5574 800x533

ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮಕ್ಕಳಿಗೆ ಶ್ರೀಕೃಷ್ಣನ ವೇಷವನ್ನು ಹಾಕಿ ಸ್ಪರ್ಧೆಗೆ ಬಂದಿರುವ ಮುದ್ದುಮಕ್ಕಳು ಅಭಿನಂದನೀಯರು. ಇವರನ್ನು ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಿದಾಗ ಇವರು ದೇಶಕ್ಕೆ ಉತ್ತಮ ಪ್ರಜೆಯಾಗುತ್ತಾರೆ. ಇವರು ಸಹ ಎಲ್ಲರಿಗೂ ಸಮಾನವಾದ ಗೌರವವನ್ನು ನೀಡುತ್ತಾರೆ ಎಂದು ಹೇಳಿದರು.
1k7a5559 800x533

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಇವರು ವಹಿಸಿ ಮಾತನಾಡಿ ನಾವು ಸ್ಪರ್ಧೆಯಲ್ಲಿ ಭಾಗವಹಿಸುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚುಗೊಳಿಸುತ್ತದೆ. ಈ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೋತ್ಸಾಹಿಸುವ ಶಿಕ್ಷಕರು, ಸಂಸ್ಥೆ ಹಾಗೂ ಪೋಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
1k7a5621 800x533
ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಷಿಯಾ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶರಣಪ್ಪ ಹಾಗೂ ವಂದನಾರ್ಪಣೆಯನ್ನು ಭವ್ಯಶ್ರೀ ಇವರು ಸಲ್ಲಿಸಿದರು. ಪೂರ್ಣೇಶ್ ಚಿತ್ರಕಲಾ ಅಧ್ಯಾಪಕರು ಕಾರ್ಯಕ್ರಮದ ಸಂಯೋಜಕರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
1k7a5618 800x533

ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ ಚಿತ್ರಕಲೆ ಪ್ರಥಮ ಸ್ಥಾನವನ್ನು ಅಗಮ್ಯ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು, ದ್ವಿತೀಯ ಸ್ಥಾನವನ್ನು ಅನ್ವಿತ್ ಹರೀಶ್ ಕೆನರಾ ಶಾಲೆ ಉರ್ವಾ, ತೃತೀಯ ಸ್ಥಾನವನ್ನು ಅವನಿ ಬೆಳ್ಳಾರೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿನಿ,

1k7a5617 800x533

ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನವನ್ನು ಚಿನ್ಮಯಿ ಮತ್ತು ತಂಡ ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲು, ದ್ವಿತೀಯ ಸ್ಥಾನವನ್ನು ಅಪೇಕ್ಷ ಮತ್ತು ತಂಡ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ತೃತೀಯ ಸ್ಥಾನವನ್ನು ಸ್ಪಂದನ ಮತ್ತು ತಂಡ ಕುವೆಂಪು ಶಾಲೆ, ಶಕ್ತಿನಗರ,
1k7a5615 800x533
ಮುದ್ದುಕೃಷ್ಣದಲ್ಲಿ ಪ್ರಥಮ ಸ್ಥಾನವನ್ನು ಕೈರಾ ಗಿರೀಶ್ ಶೆಣೈ, ದ್ವಿತೀಯ ಸ್ಥಾನವನ್ನು ನೇಹಲ್ ಎಂ. ರಾವ್, ತೃತೀಯ ಸ್ಥಾನವನ್ನು ಲಕ್ಷ್ಯ ರಾವ್, ಬೆಣ್ಣೆ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅವೀಶ್ ಎಸ್. ಶೆಟ್ಟಿ, ದ್ವಿತೀಯ ಸ್ಥಾನವನ್ನು ಗಾನ್ವಿ, ತೃತೀಯ ಸ್ಥಾನವನ್ನು ದೀತ್ಯಾ.
1k7a5612 800x533

ಯಶೋದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಾನ್ವಿ ಮತ್ತು ಚಿತ್ರಾಕ್ಷಿ, ದ್ವಿತೀಯ ಸ್ಥಾನವನ್ನು ನೆಹಾಲಿ ಮತ್ತು ವಿದ್ಯಾ, ತೃತೀಯ ಸ್ಥಾನವನ್ನು ಶೌರ್ಯ ಮತ್ತು ಆಧಿತಿ ಪಡೆದಿರುತ್ತಾರೆ.
1k7a5610 800x533
ದ್ವಿತೀಯ ಸ್ಥಾನವನ್ನು ರಾಶಿ ಮತ್ತು ತಂಡ ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಆಶ್ರಿತ್ ಶೆಟ್ಟಿ ಮತ್ತು ತಂಡ ರಾಜ್ ಅಕಾಡೆಮಿ, ಗೀತಾ ಕಂಠಪಾಠ (1ನೇ ತರಗತಿಯಿಂದ 5ನೇ ತರಗತಿ) ಪ್ರಥಮ ಸ್ಥಾನವನ್ನು ದಿವ್ಯಾಭಟ್ ಶಾರದಾ ವಿದ್ಯಾಲಯ,

1k7a5608 800x533
ದ್ವಿತೀಯ ಸ್ಥಾನವನ್ನು ಪ್ರೇರಣಾ ಪ್ರಶಾಂತ್ ಶರ್ಮ ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಅಮೋದ್ ಶಾಸ್ತ್ರಿ ಕೆನರಾ ಶಾಲೆ ಉರ್ವ ಇವರು ಪಡೆದಿರುತ್ತಾರೆ. ಗೀತಾ ಕಂಠಪಾಠ (6ನೇ ತರಗತಿಯಿಂದ 7ನೇ ತರಗತಿ ವರೆಗೆ) ಪ್ರಥಮ ಸ್ಥಾನವನ್ನು ಪ್ರಕೃತಿ ಶರ್ಮ, ಶಾರದಾ ವಿದ್ಯಾನಿಲಯ
1k7a5606 800x533
ದ್ವಿತೀಯ ಸ್ಥಾನವನ್ನು ಮುಕುಂದ್ ಎಸ್ ವಿವೇಕಾನಂದ ಶಾಲೆ ಪುತ್ತೂರು, ತೃತೀಯ ಸ್ಥಾನವನ್ನು ಚೇತನ್ ರಾವ್ ಶಾರದಾ ವಿದ್ಯಾನಿಲಯ ಪಡೆದಿರುತ್ತಾರೆ. ಗೀತಾ ಕಂಠಪಾಠ (8ನೇ ತರಗತಿಯಿಂದ 10ನೇ ತರಗತಿ ವರೆಗೆ) ಪ್ರಥಮ ಸ್ಥಾನವನ್ನು ಸಮುದ್ಯತ, ಅಮೃತ ವಿದ್ಯಾಲಯ,

1k7a5603 800x533
ದ್ವಿತೀಯ ಸ್ಥಾನವನ್ನು ತನ್ವಿ ಬಿ. ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಶ್ರೀಶಾ ನಿಡ್ವಾಣಯ ವಿವೇಕಾನಂದ ಶಾಲೆ ಪುತ್ತೂರು ಇವರು ಪಡೆದಿರುತ್ತಾರೆ.
1k7a5605 800x533

1k7a5602 800x533
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಒಟ್ಟು 15 ಶಾಲೆಗಳ 150 ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸ್ಪರ್ದೆಯಲ್ಲಿ ಭಾಗವಹಿಸಿದರು.

1k7a5600 800x533

1k7a5599 800x533

1k7a5597 800x533

1k7a5593 800x533

1k7a5588 800x533

1k7a5584 800x533

1k7a5587 800x533

1k7a5582 800x533

1k7a5578 800x533

1k7a5572 800x533