ಮಂಗಳೂರು : ಹಿಂದು ಜಾಗರಣ ವೇದಿಕೆ ತಲಪಾಡಿ ವಲಯ ಉಳ್ಳಾಲ ಇವರ ಬಹು ದಿನಗಳ ಬೇಡಿಕೆಯಾದ ಉಚಿತ ಆಂಬುಲೆನ್ಸ್ ಸೇವೆಯನ್ನ ಸನ್ಮಿತಾ ಹಾಲಿಡೇಸ್ ಸಂಸ್ಥೆಯ ಮಾಲಕ ಉದ್ಯಮಿಯಾದ ಶೈಲೇಶ್ ಬಜಿಲಕೇರಿ ಕೊಡುಗೆಯಾಗಿ ನೀಡಿದರು.

ಆದಿತ್ಯವಾರ ತಲಪಡಿ ದೇವಿಪುರದಲ್ಲಿ ನಡೆದ ಸಭಾರಂಭದಲ್ಲಿ ಕೊಡುಗೆಯಾಗಿ ನೀಡಲಾಯಿತ್ತು. ಈ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳಾದ ಕಿಶೋರ್ ಕುಮಾರ್ , ಅರುಣ್ ಬಂಗೇರ, ವಾಸುದೇವ ಗೌಡ ಸಹಿತ ಹಿಂದೂ ಮುಖಂಡರುಗಳಾದ ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ರಾಹುಲ್ ಪೂಜಾರಿ, ದಿನೇಶ್ ಶೆಟ್ಟಿ, ಉದ್ಯಮಿಗಳಾದ ಅವಿನಾಶ್ ಸುವರ್ಣ, ಪಮ್ಮಿ ಕೊಡಿಯಾಲಬೈಲ್, ರಾಕೇಶ್, ಸಂಜಯ್ ಕೊಟ್ಯಾನ್ ಉಪಸ್ಥಿತರಿದ್ದು ನ್ಯಾಯವಾದಿಗಳಾದ ವಾಸುದೇವ ಗೌಡ ರಿಬ್ಬನ್ ಕತ್ತರಿಸಿ ತೆಂಗಿನಕಾಯಿ ಒಡೆಯುವ ಮೂಲಕ ಲೋಕಾರ್ಪಣೆ ಮಾಡಿದರು. ನ್ಯಾಯವಾದಿಗಳಾದ ಅರುಣ್ ಬಂಗೇರ ಆಂಬುಲೆನ್ಸ್ ಕೀಯನ್ನ ಹಸ್ತಾಂತರ ಮಾಡಿದರು.

ಬಳಿಕ ನಡೆದ ಸಭಾಕಾರ್ಯಕ್ರಮವನ್ನ ದೇವಸ್ಥಾನದ ಅರ್ಚಕರಾದ ಗಣೇಶ್ ಮತ್ತು ನೆರೆದ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಖ್ಯಾತ ವಕೀಲರಾದ ಅರುಣ್ ಬಂಗೇರ ಮತ್ತು ಸನ್ಮಿತಾ ಹಾಲಿಡೇಸ್ ಹಾಲಿಡೇಸ್ ಸಂಸ್ಥೆಯ ಮಾಲಕ ಉದ್ಯಮಿಯಾದ ಶೈಲೇಶ್ ಬಜಿಲಕೇರಿ ದಂಪತಿಗಳನ್ನ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತ್ತು.