ಮಂಗಳೂರು: ಏರ್‌ಪೋಟ್ ರಸ್ತೆಯ ಯೆಯ್ಯಾಡಿ ಬಳಿ ಸರಣಿ ಅಪಘಾತ ನಡೆದಿದೆ. ಇದರಲ್ಲಿ 6 ವಾಹನಗಳು ಜಖಂಗೊಂಡಿದ್ದು, ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ಸಾಗ್ತಾ ಇದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

ಹಿಂಬದಿಯ ಕಾರು ಢಿಕ್ಕಿ ಹೊಡೆದ ಕಾರಣ ಕಾರಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅಲ್ಲೆ ಪಾರ್ಕ್ ಮಾಡಿದ ವಾಹನಗಳಿಗೆ ಕಾರು ಢಿಕ್ಕಿ ಹೊಡೆದು, ಬಳಿಕ ರಸ್ತೆಯ ಬದಿಯಲ್ಲಿನ ಸೂಚನ ಫಲಕಕ್ಕೆ ಢಿಕ್ಕಿಯಾಗಿದೆ.

ಅಪಘಾತದಲ್ಲಿ ಯಾವುದೇ ಅಪಯವಾಗದಿದ್ರೂ 6 ವಾಹನಗಳು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಬ್ರೇಕ್ ಫೈಲ್‌ನಿಂದ ಆಗಿದೆ ಎಂದು ಕಾರು ಚಾಲಕ ಹೇಳಿದ್ರೂ ನಿಖರವಾದ ಕಾರಣ ಏನು ಎಂಬುವುದು ತನಿಖೆ ಬಳಿಕ ಬಯಲಾಗಬೇಕಿದೆ.