ಕೂಳೂರು: ಬಂಗ್ರಕೂಳೂರು ವಿಆರ್‌ ಎಸ್ ಮುಂಭಾಗ ಸ್ಕೂಟರ್ ಗೆ ಹಿಂಭಾಗದಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆ ಬಿದ್ದಿದ್ದು, ಈ ವೇಳೆ ಲಾರಿ ಚಕ್ರ ಸವಾರನ ಮೇಲೆಯೇ ಚಳಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಸದಾನಂದ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಸದಾನಂದ ಅವರು ತಮ್ಮ ಇವಿ ಸ್ಕೂಟರ್ ನಲ್ಲಿ ಕೂಳೂರಿನಲ್ಲಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ.