ಮಂಗಳೂರು: ಬೆಳ್ಳಂಬೆಳಿಗ್ಗೆ ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ‌ ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆ ‌ ನಡೆದಿದೆ.

ರೌಡಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ (46)ಕೊಲೆಯಾದ ರೌಡಿಶೀಟರ್. ಆರಿಫ್ ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿಯಾಗಿದ್ದು, ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯವರಾಗಿದ್ದಾರೆ.

ಬೈಕ್ ನಲ್ಲಿ ತೆರಳುತಿದ್ದ ಆರಿಫ್ ಗೆ ಹಿಂಬದಿಂದ ದುಷ್ಕರ್ಮಿಗಳ ತಂಡ ಕಾರ್ ಡಿಕ್ಕಿ ಹೊಡಿಸಿದೆ. ರಸ್ತೆಗೆ ಬಿದ್ದ ಆರಿಫ್ ಮೇಲೆ ಮಾರಕಾಸ್ತ್ರ ಗಳಿಂದ ಕಡಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಕಾರ್ ನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆಗೆ ಗ್ಯಾಂಗ್ ವಾರ್ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.