ಮಂಗಳೂರು : ಬೆಳ್ಳಂ ಬೆಳಗ್ಗೆ ರಾಬರಿ ಬೆಚ್ಚಿ ಬೀಳಿಸಿದ್ದು, ಗಂಡನ ಎದುರೇ ಪತ್ನಿ ಹಾಗು ಮಗುವನ್ನ ಕಾರ್ ಸಮೇತ ಕಿಡ್ನಾಪ್ ಮಾಡಿ ದರೋಡೆ ಮಾಡಲಾಯಿತು.
ಸಿನೀಮಿಯ ರೀತಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಲಾಯಿತು. ಸುರತ್ಕಲ್ ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಕಾರು ತಡೆದು ಕೃತ್ಯ ಎಸಗಲಾಯಿತು. ಎರಡು ಇನೋವಾ, ಒಂದು ಸ್ವಿಫ್ಟ್ ಕಾರಿನಲ್ಲಿ ಬಂದು ತಂಡದಿಂದ ಕೃತ್ಯ ನಡೆಸಲಾಯಿತು.
ಪಯ್ಯನ್ನೂರು ನಿವಾಸಿ ವಿಕಾಸ್ ಎಂಬ ಚಿನ್ನದ ವ್ಯಾಪಾರಿಯ ಕಾರು, ಚಿನ್ನ ಅಪಹರಣ ಮಾಡಲಾಗಿದ್ದು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಿಕಾಸ್ ಕುಟುಂಬ ಹಿಂತಿರುಗುತ್ತಿತ್ತು. ಸ್ವಿಫ್ಟ್ ಕಾರಿನಲ್ಲಿ ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದಾಗ ಬೈಕಂಪಾಡಿಯಲ್ಲಿ ತಂಡ ಅಡ್ಡಗಟ್ಟಿದೆ.
ಇಂದು ನಸುಕಿನ ನಾಲ್ಕು ಗಂಟೆ ವೇಳೆಗೆ ಬೈಕಂಪಾಡಿಯಲ್ಲಿ ಕೃತ್ಯ ಎಸಗಲಾಗಿದೆ. ಬೈಕಂಪಾಡಿ ದ್ವಾರದ ಬಳಿ ಅಡ್ಡಗಟ್ಟಿದ ತಂಡ ವಿಕಾಸ್ ಅವರನ್ನು ಇಳಿಸಿ ಕಾರನ್ನು ಅಪಹರಿಸಿತ್ತು. ಕಾರಿನಲ್ಲಿದ್ದ ವಿಕಾಸ್ ಪತ್ನಿ ಮತ್ತು ಪುತ್ರನನ್ನು ಬೆದರಿಸಿ ಕುಳೂರು ಬಳಿ ಹೊರಕ್ಕಟ್ಟಲಾಯಿತು.
ಸಿನಿಮಾ ಶೈಲಿಯಲ್ಲಿ ಕಾರನ್ನು ತಡೆದು ಅದರಲ್ಲಿದ್ದ ಚಿನ್ನ ಮತ್ತು ನಗದಿನೊಂದಿಗೆ ಪರಾರಿಯಾಗಿದೆ. ಅಂದಾಜು 20 ಲಕ್ಷ ಮೌಲ್ಯದ ಚಿನ್ನ ನಗದಿನೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ಸಿಸಿಟಿವಿ ಆಧರಿಸಿ ಪಣಂಬೂರು ಠಾಣೆ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.

