ಬೆಳ್ತಂಗಡಿ: ಬೆಳಾಲು ಗ್ರಾಮದ ಎಸ್.ಪಿ.ಬಿ. ಕೌಂಪೌಂಡ್ ನಿವಾಸಿ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಸ್.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶನಿವಾರ(ಆ.24ರಂದು) ಬಂಧಿಸಲಾಗಿದೆ.
ಪ್ರಕರಣ ಸಂಬಂಧಿಸಿ ಕೇರಳ ಮೂಲದ ಇಬ್ಬರು ಆರೋಪಿಗಳಾದ ಮುರಳೀಕೃಷ್ಣ (21), ರಾಘವೇಂದ್ರ.ವಿ (58) ಅವರನ್ನು ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದಾರೆ.ಕೊಲೆಯಾದ ಬಾಲಕೃಷ್ಣ ಬಡೆಕಿಲ್ಲಾಯ ಅವರ ಪತ್ನಿ ದಿ.ಲೀಲಾಲವರ ಒಡವೆಗಳನ್ನು ಬ್ಯಾಂಕ್ ಲಾಕರ್ ನಲ್ಲಿರಿಸಿದ್ದು ಸದ್ರಿ ಒಡವೆಗಳನ್ನು ಮಗಳು ವಿಜಯಲಕ್ಷ್ಮಿಯವರಿಗೆ ನೀಡಬೇಕೆನ್ನುವ ವಿಚಾರದಲ್ಲಿ ಬಾಲಕೃಷ್ಣ ಬಡೆಕಿಲ್ಲಾಯ ಅವರನ್ನು ಅಳಿಯ (ಮಗಳ ಗಂಡ) ಹಾಗೂ ಮೊಮ್ಮಗ(ಮಗಳ ಮಗ) ಕೊಲೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

