ಮಂಗಳೂರು: ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ʻಕೆಎಂಸಿ ಆಸ್ಪತ್ರೆʼಯಲ್ಲಿ ನವೀಕರಿಸಿದ ಮತ್ತು ಸುಧಾರಿತ ತುರ್ತು ಚಿಕಿತ್ಸಾ ವಿಭಾಗವನ್ನು ʻಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ʼನ ಅಧ್ಯಕ್ಷರಾದ ಡಾ. ಎಚ್. ಸುದರ್ಶನ್ ಬಲ್ಲಾಳ್ ಉದ್ಘಾಟಿಸಿದರು.

ಈ ಭಾಗದಲ್ಲಿ ತುರ್ತು ಆರೈಕೆಯನ್ನು ಹೆಚ್ಚಿಸುವಲ್ಲಿ ಇದೊಂದು ಪ್ರಮುಖ ಮೈಲುಗಲ್ಲಾಗಿದೆ. ಈ ಬೆಳವಣಿಗೆಯು ಅತ್ಯಾಧುನಿಕ ತುರ್ತು ಸೇವೆಗಳನ್ನು ಒದಗಿಸುವಲ್ಲಿ, ಅಗತ್ಯವಿರುವ ಎಲ್ಲಾ ರೋಗಿಗಳಿಗೆ ಸಮಯೋಚಿತ ಮತ್ತು ಉತ್ತಮ ಗುಣಮಟ್ಟದ ಆರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ʻಕೆಎಂಸಿ ಆಸ್ಪತ್ರೆʼಯ ಬದ್ಧತೆಯನ್ನು ಒತ್ತಿಹೇಳುತ್ತದೆ.

ನವೀಕರಿಸಿದ ತುರ್ತುಚಿಕಿತ್ಸಾ ವಿಭಾಗವು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ, ಮತ್ತು ಎಲ್ಲಾ ರೀತಿಯ ವಯಸ್ಕ ಮತ್ತು ಮಕ್ಕಳ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಅನುಭವಿ ಸಿಬ್ಬಂದಿಯೊಂದಿಗೆ ತುರ್ತು ವೈದ್ಯರ ತಂಡವನ್ನು ಹೊಂದಿದೆ.  ಈ ವಿಭಾಗವು ʻಟ್ರಯಜ್ ಪ್ರೋಟೋಕಾಲ್ʼಗಳಲ್ಲಿ ಉತ್ತಮ ಕಾರ್ಯವಿಧಾನಗಳನ್ನು ಅನುಸರಿಸುತ್ತದೆ,

ಆ ಮೂಲಕ ರೋಗಿಗಳಿಗೆ ಪರಿಣಾಮಕಾರಿ ಮತ್ತು ಸಮಯೋಚಿತ ಆರೈಕೆಯನ್ನು ಖಚಿತಪಡಿಸುತ್ತದೆ. ಈ ಸುಧಾರಿತ ಸೌಲಭ್ಯವು 15 ಹಾಸಿಗೆಗಳ ತುರ್ತುಚಿಕಿತ್ಸಾ ಕೊಠಡಿ, ತುರ್ತು ಮಕ್ಕಳ ಆರೈಕೆ, ಪಾರ್ಶ್ವವಾಯು, ಹೃದಯ ತುರ್ತುಸ್ಥಿತಿ ಮತ್ತು ಆಪಘಾತದ ನಿರ್ವಹಣೆಗಾಗಿ ವಿಶೇಷ ತಂಡವನ್ನು ಒಳಗೊಂಡಿದೆ. ಈ ವಿಭಾಗವು ಸಮಗ್ರ ರೇಡಿಯಾಲಜಿ ಸೇವೆಗಳು ಹಾಗೂ ತಕ್ಷಣದ ರೋಗನಿರ್ಣಯಕ್ಕಾಗಿ ಅತ್ಯಾಧುನಿಕ ಲ್ಯಾಬ್ ಅನ್ನೂ ಹೊಂದಿದೆ.

ಈ ವಿಭಾಗವು 24×7 ಆಂಬ್ಯುಲೆನ್ಸ್ ಸೇವೆಯನ್ನು (ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವೀಸಸ್) ಸಹ ಒದಗಿಸುತ್ತದೆ, ಪ್ರಯಾಣದ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳನ್ನು ನಿರ್ವಹಿಸಲು ಅರೆವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ, ಆ ಮೂಲಕ ರೋಗಿಯು ಆಸ್ಪತ್ರೆಗೆ ಬರುವ ಮೊದಲೇ ನಿರ್ಣಾಯಕ ಆರೈಕೆಯನ್ನು ಖಾತರಿಪಡಿಸುತ್ತದೆ. ದಾದಿಯರು ʻಬೇಸಿಕ್ ಲೈಫ್ ಸಪೋರ್ಟ್ʼ(ಬಿಎಲ್ಎಸ್) ಮತ್ತು ʻಅಡ್ವಾನ್ಸ್ಡ್ ಕಾರ್ಡಿಯೋವ್ಯಾಸ್ಕುಲರ್ ಲೈಫ್ ಸಪೋರ್ಟ್ʼ(ಎಸಿಎಲ್ಎಸ್) ವಿಭಾಗದಲ್ಲಿ ತರಬೇತಿ ಪಡೆದಿದ್ದು, ಇದರಿಂದ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ತುರ್ತುಸ್ಥಿತಿಗಳ ನಿರ್ವಹಣೆಗೆ ನೆರವಾಗಲಿದೆ.

ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (ಎಂಎಚ್ಇಪಿಎಲ್) ಅಧ್ಯಕ್ಷರಾದ ಡಾ.ಎಚ್.ಸುದರ್ಶನ್ ಬಲ್ಲಾಳ್ ಅವರು ಮಾತನಾಡಿ, “ಈ ತುರ್ತು ಸೌಲಭ್ಯದ ನವೀಕರಣವು ನಮ್ಮ ಸಮುದಾಯಕ್ಕೆ ಸಾಧ್ಯವಾದಷ್ಟು ಉತ್ತಮ ಆರೈಕೆಯನ್ನು ಒದಗಿಸುವ ನಮ್ಮ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ಸಮರ್ಪಿತ ತಂಡದೊಂದಿಗೆ, ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ನಿರ್ವಹಿಸಲು ನಾವು ಸಜ್ಜುಗೊಂಡಿದ್ದೇವೆ,” ಎಂದು ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಜೀಧು ರಾಧಾಕೃಷ್ಣನ್ ಅವರು ಮಾತನಾಡಿ, “ಹೊಸದಾಗಿ ನವೀಕರಿಸಿದ ತುರ್ತು ವಿಭಾಗವು ಈಗ ದಿನದ 24 ಗಂಟೆಯೂ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ತುರ್ತುಸ್ಥಿತಿಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ಸಜ್ಜುಗೊಂಡಿದೆ. ಅತ್ಯುತ್ತಮ ತರಬೇತಿ ಪಡೆದ ನಮ್ಮ ತಂಡ ಹಾಗೂ ಇಲ್ಲಿನ ಸುಧಾರಿತ ಸೇವೆಗಳು, ರೋಗಿಗಳಿಗೆ ನಿರ್ಣಾಯಕ ಸಮಯದಲ್ಲಿ ಉತ್ತಮ ಆರೈಕೆಯನ್ನು ಖಚಿತಪಡಿಸುತ್ತವೆ.

ಆಧುನಿಕ ಸೌಲಭ್ಯಗಳು ಮತ್ತು ತರಬೇತಿ ಪಡೆದ ವೈದ್ಯರನ್ನು ಹೊಂದಿರುವ ಉತ್ತಮ ತುರ್ತುಚಿಕಿತ್ಸಾ ವಿಭಾಗವು ಯಾವುದೇ ವಿಸ್ತರಿತ ಆರೈಕೆ ಕೇಂದ್ರದ ತುರ್ತು ಅಗತ್ಯವಾಗಿರುತ್ತದೆ. ಜೀವಗಳನ್ನು ಉಳಿಸಲು ನಿರ್ಣಾಯಕವಾಗಿರುವ ʻಸುವರ್ಣ ಅವಧಿʼಯನ್ನು(ಗೋಲ್ಡನ್ ಅವರ್) ಸದ್ಬಳಕೆ ಮಾಡಿಕೊಳ್ಳಲು ತುರ್ತು ಸಂದರ್ಭಗಳಲ್ಲಿ ಇಂತಹ ಕೇಂದ್ರಕ್ಕೆ ಹೋಗುವುದು ಸೂಕ್ತ,” ಎಂದು ಹೇಳಿದರು.

ಗೋ ಇಂಡಿಗೊ ವಿಮಾನ ನಿಲ್ದಾಣ ವ್ಯವಸ್ಥಾಪಕ ಶ್ರೀ ಬೋಪಣ್ಣ ಕೆ ಪಿ, “ಇತ್ತೀಚೆಗೆ ವಿಶೇಷವಾಗಿ ಯುವ ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತಗಳು, ಕೆಲಸದ ಅಪಾಯಗಳು, ಪಾರ್ಶ್ವವಾಯು ಮತ್ತು ಹೃದಯ ತುರ್ತುಸ್ಥಿತಿಗಳಿಗೆ ಒಳಗಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮಕ್ಕಳ ತುರ್ತುಸ್ಥಿತಿಗಳ ಬಗ್ಗೆಯೂ ನಾವು ಕೇಳಿತ್ತಿರುತ್ತೇವೆ. ಹಾಗಾಗಿ ಇಂತಹ ಪೂರ್ಣ ಪ್ರಮಾಣದ ತುರ್ತುಚಿಕಿತ್ಸಾ ಕೇಂದ್ರವು ಈಗಿನ ತುರ್ತು ಅಗತ್ಯವಾಗಿದೆ” ಎಂದು ಹೇಳಿದರು.

ʻಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ʼನ ಸಿಇಒ ಶ್ರೀ ಸುಧೀರ್ ಕುಮಾರ್ ದೀಕ್ಷಿತ್ ರವರು ಮಾತನಾಡಿ, “ನಗರದಲ್ಲಿ ಪ್ರಸ್ತುತ ತುರ್ತು ಪ್ರಕರಣಗಳ ಹೆಚ್ಚಳವು ತ್ವರಿತ ಮತ್ತು ವಿಶೇಷ ವೈದ್ಯಕೀಯ ಆರೈಕೆಯ ಬೇಡಿಕೆಯನ್ನು ಎತ್ತಿ ತೋರುತ್ತದೆ. ಈ ವಿಭಾಗವು ಜೀವಗಳನ್ನು ಉಳಿಸುವ ಆಸ್ಪತ್ರೆಯ ಬದ್ಧತೆಗೆ ಸಾಕ್ಷಿಯಾಗಿ ನಿಂತಿದೆ, ಗಂಭೀರ ಅಗತ್ಯವಿರುವ ಪ್ರತಿಯೊಬ್ಬ ರೋಗಿಯು ಸಮಯೋಚಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ. ಆರೋಗ್ಯ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದೆಂದರೆ ಕೇವಲ ಕಟ್ಟಡಗಳು ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಲ್ಲ – ಇದು ನಮ್ಮ ಸಮುದಾಯದ ಜೀವನಾಡಿಯನ್ನು ಬಲಪಡಿಸುವುದಕ್ಕೂ ಸಂಬಂಧಿಸಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು,ʼʼ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪ್ರವೀಣ್ ಕುಮಾರ್ ರವರು ಮಾತನಾಡಿ, “ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ಪ್ರವಾಸೋದ್ಯಮದ ಕೇಂದ್ರವಾಗಿ ಹೊರಹೊಮ್ಮಿದ್ದು, ಗಡಿಯಾಚೆಗಿನ ರೋಗಿಗಳನ್ನು ಆಕರ್ಷಿಸುತ್ತಿದೆ. ಈ ಬೆಳವಣಿಗೆಯಿಂದಾಗಿ ಇಲ್ಲಿನ ನಿವಾಸಿಗಳು ಮತ್ತು ಸಂದರ್ಶಕರಿಗೆ ವಿಶ್ವದರ್ಜೆಯ ತುರ್ತು ಆರೈಕೆ ದೊರೆಯುವಂತೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಸೌಲಭ್ಯವು ಕೇವಲ ವೈದ್ಯಕೀಯ ಉತ್ಕೃಷ್ಟತೆಗೆ ಸಾಕ್ಷಿ ಮಾತ್ರವಲ್ಲ, ಜೀವಗಳನ್ನು ಉಳಿಸುವ ಬದ್ಧತೆಯಾಗಿದೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ನಾಯಕನಾಗಿ ಮಂಗಳೂರು ನಗರದ ಖ್ಯಾತಿಯನ್ನು ಬಲಪಡಿಸುತ್ತದೆ,” ಎಂದು ಹೇಳಿದರು.

ಕೆಎಂಸಿ ಆಸ್ಪತ್ರೆಯ ಮಂಗಳೂರು ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, “ನಮ್ಮ ನವೀಕರಿಸಿದ ತುರ್ತು ವಿಭಾಗದ ಉದ್ಘಾಟನೆಯು ಉತ್ತಮ ಗುಣಮಟ್ಟದ ಆರೋಗ್ಯ ಆರೈಕೆಯ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. 24×7 ತುರ್ತುಚಿಕಿತ್ಸಾ ಸೌಲಭ್ಯವು ಅರ್ಹ ಮತ್ತು ಅನುಭವಿ ವೈದ್ಯರು ಹಾಗೂ ಸಿಬ್ಬಂದಿಯ ತಂಡದಿಂದ ನಿರ್ವಹಿಸಲ್ಪಡುತ್ತದೆ, ಅವರು ಸಮಯೋಚಿತ ವೈದ್ಯಕೀಯ ಹಸ್ತಕ್ಷೇಪವನ್ನು ಖಚಿತಪಡಿಸಿಕೊಳ್ಳುತ್ತಾರೆ, ಜೊತೆಗೆ 24×7 ನಿರ್ಣಾಯಕ ಸೇವೆಗಳು, ರೇಡಿಯಾಲಜಿ ಸೇವೆಗಳು, ಪ್ರಯೋಗಾಲಯ ಸೇವೆಗಳು ಮತ್ತು ಮೆಡಿಕಲ್ ಸ್ಟೋರ್ಗಳನ್ನು ಇದು ಒಳಗೊಂಡಿದೆ,ʼʼ ಎಂದು ಹೇಳಿದರು.

ಕೆಎಂಸಿ ಆಸ್ಪತ್ರೆಯ ಉನ್ನತೀಕರಿಸಿದ ತುರ್ತು ಔಷಧ ವಿಭಾಗವು ಸಮಗ್ರ, ಜೀವ ಉಳಿಸುವ ಆರೈಕೆಯನ್ನು ಒದಗಿಸುವ ಆಸ್ಪತ್ರೆಯ ನಿರಂತರ ಪ್ರಯತ್ನಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ, ಈ ಪ್ರದೇಶದ ನಗರ ಮತ್ತು ಗ್ರಾಮೀಣ ಜನರ ಯೋಗಕ್ಷೇಮವನ್ನು ಇದು ಖಚಿತಪಡಿಸುತ್ತದೆ.

ʻಮಣಿಪಾಲ್ ಹಾಸ್ಪಿಟಲ್ಸ್ʼ ಆರೋಗ್ಯ ರಕ್ಷಣೆಯ ಪ್ರವರ್ತಕ ಸಂಸ್ಥೆಯಾಗಿರುವ, ʻಮಣಿಪಾಲ್ ಹಾಸ್ಪಿಟಲ್ಸ್ʼ, ವಾರ್ಷಿಕವಾಗಿ 7 ದಶಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಭಾರತದ ಅತ್ಯುನ್ನತ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಒಂದೆನಿಸಿದೆ. ಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಶ್ರೇಣಿಯ ಆರೈಕೆ ಮೂಲಕ ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯಸೇವಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಆಸ್ಪತ್ರೆಯ ಹೊರಗಿನ ಆರೈಕೆಗೂ ಅದನ್ನು ವಿಸ್ತರಿಸುವುದರತ್ತ ಸಂಸ್ಥೆಯು ಗಮನ ಹರಿಸುತ್ತದೆ.

ʻಮೆಡಿಕಾ ಸೈನರ್ಜಿ ಹಾಸ್ಪಿಟಲ್ಸ್ʼ ಮತ್ತು ʻಎಎಂಆರ್ಐ ಹಾಸ್ಪಿಟಲ್ಸ್ ಲಿಮಿಟೆಡ್ʼ ಸ್ವಾಧೀನ ಪೂರ್ಣಗೊಂಡ ನಂತರ(2023ರ ಸೆಪ್ಟೆಂಬರ್ನಲ್ಲಿ ಸ್ವಾಧೀನ), ಮಣಿಪಾಲ್ ಹಾಸ್ಪಿಟಲ್ಸ್ನ ಸಂಯೋಜಿತ ಆಸ್ಪತ್ರೆಗಳ ಜಾಲವು ಇಂದು 19 ನಗರಗಳಲ್ಲಿ 10,500ಕ್ಕೂ ಹಾಸಿಗೆಗಳು, 5,600ಕ್ಕೂ ಹೆಚ್ಚು ಪ್ರತಿಭಾವಂತ ವೈದ್ಯರು ಮತ್ತು 18,600ಕ್ಕೂ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯವನ್ನು ಹೊಂದಿರುವ 37 ಆಸ್ಪತ್ರೆಗಳ ಪ್ಯಾನ್- ಇಂಡಿಯಾ ಹೆಜ್ಜೆಗುರುತನ್ನು ಹೊಂದಿದೆ.

ಮಣಿಪಾಲ್ ಹಾಸ್ಪಿಟಲ್ಸ್ ಪ್ರಪಂಚದಾದ್ಯಂತ ವೈವಿಧ್ಯಮಯ ರೋಗಿಗಳಿಗೆ ಸಮಗ್ರ ರೋಗಶಮನ ಮತ್ತು ತಡೆಗಟ್ಟುವಿಕೆ ಸೇವೆಯನ್ನು ಒದಗಿಸುತ್ತವೆ. ಮಣಿಪಾಲ್ ಹಾಸ್ಪಿಟಲ್ಸ್ ʻಎನ್ಎಬಿಎಚ್ʼ, ʻಎಎಎಚ್ಆರ್ಪಿಪಿʼ ಮಾನ್ಯತೆ ಪಡೆದಿದೆ ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು ʻಎನ್ಎಬಿಎಲ್ʼ, ʻಇಆರ್ʼ, ʻಬ್ಲಡ್ ಬ್ಯಾಂಕ್ʼ ಮಾನ್ಯತೆ ಪಡೆದಿವೆ ಜೊತೆಗೆ, ನರ್ಸಿಂಗ್ ಉತ್ಕೃಷ್ಟತೆಗಾಗಿ ಗುರುತಿಸಲ್ಪಟ್ಟಿದೆ. ವಿವಿಧ ಗ್ರಾಹಕ ಸಮೀಕ್ಷೆಗಳಲ್ಲಿ ಭಾರತದ ಅತ್ಯಂತ ಗೌರವಾನ್ವಿತ ಮತ್ತು ರೋಗಿ ಶಿಫಾರಸು ಮಾಡಿದ ಆಸ್ಪತ್ರೆಯಾಗಿ ʻಮಣಿಪಾಲ್ ಹಾಸ್ಪಿಟಲ್ಸ್ʼ ಗುರುತಿಸಲ್ಪಟ್ಟಿದೆ.