ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ 10 ಲಕ್ಷ ರೂಪಾಯಿ ವರೆಗಿನ ಅಪಘಾತ ವಿಮಾ ಯೋಜನೆ ನೋಂದಾವಣೆ ಕಾರ್ಯಕ್ರಮ ಆಗಸ್ಟ್ 20 ರಂದು ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ.
ಅಪಘಾತ ವಿಮಾ ಯೋಜನೆ ಶಿಬಿರ ಬರುವಾಗ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ತರಬೇಕಾಗಿದೆ.
1.ಆಧಾರ್ ಕಾರ್ಡ್ ಪ್ರತಿ
2.nominnee ಆಧಾರ್ ಕಾರ್ಡ್ ಪ್ರತಿ
3.ಆಧಾರ್ ಲಿಂಕ್ ಆಗಿರುವ ಮೊಬೈಲ್
4.10 ಲಕ್ಷ ರೂಪಾಯಿ ಅಪಘಾತ ವಿಮಾ ಯೋಜನೆ ವೆಚ್ಚ ಪ್ರತಿಯೊಬ್ಬರಿಗೆ 550 ರೂಪಾಯಿ ತಗಲುತ್ತಿದ್ದು, ಈ ಮೊತ್ತ ವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಯಿಂದ ಪಾವತಿಸಲಾಗುವುದು.
5.ಸಂಘದ ಸದಸ್ಯರಿಗೆ ಯಾವುದೇ ಶುಲ್ಕ ವಿರುವುದಿಲ್ಲ. ನೋಂದಾವಣೆ ಸಂಪೂರ್ಣ ಉಚಿತ ವಾಗಿರುತ್ತದೆ.
ಪ್ರತಿಯೊಂದು ತಾಲೂಕುಗಳಲ್ಲಿ ಮುಂದಿನ ವಾರದಿಂದ ನೋಂದಾವಣೆ ಶಿಬಿರ ನಡೆಯಲಿದೆ. ಅಂಚೆ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ.

