ಮಂಗಳೂರು: ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಬೇಸರದ ವಿಚಾರ. ಇದು ಜಿಲ್ಲೆಯ ಸೌಹಾರ್ದತೆಗೆ ಒಂದು ಕಪ್ಪು ಚುಕ್ಕೆ. ನಮ್ಮ ಗುರಿ ಜಿಲ್ಲೆಯಲ್ಲಿ ಸೌಹಾರ್ದತೆ ಮೂಡಿಸುವಂತಾಗಿರಬೇಕು. ಇದರಲ್ಲಿ ಭಿನ್ನಾಭಿಪ್ರಯಾ ಇರಬಾರದು ಎಂದಿಲ್ಲ. ಆದ್ರೆ ಅದನ್ನು ಮಾತುಕತೆ ಮೂಲ ಬಗೆಹರಿಸಿ ಭಾರತ ನಿರ್ಮಾಣ ಮಾಡಬೇಕು ಎಂದು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿಕೆ ನೀಡಿದರು.
ಇದು ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಅಲ್ಲ ಪ್ರತೀಯೊಬ್ಬ ನಾಗರಿಕರು, ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯ. ನಾವು ಆಡುವ ಮಾತು ಸಮಾಜದ ಒಗ್ಗಟ್ಟಿಗಾಗಿ ಇರಬೇಕೇ ಹೊರತು ಸಮಾಜ ಒಡೆಯಲು ಅಲ್ಲ. ಯಾವುದೇ ಧರ್ಮ ಕೂಡ ಮನುಷ್ಯನ ಮನಸ್ಸಿಗೆ ಮತ್ತು ದೇಹಕ್ಕೆ ಗಾಯ ಮಾಡುವ ಕತ್ತಿ ಆಗಬಾರದು. ಅದು ಮನಸ್ಸಿಗೆ ಮತ್ತು ದೇಹಕ್ಕೆ ಹಿತ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪೋಲಿಸರ ಪಾತ್ರ ಹೆಚ್ಚಿದೆ ಎಂದರು.
ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಗೆ ನಿಷ್ಪಕ್ಷಪಾತ ಕ್ರಮ ಅಗತ್ಯ. ಯಾರಿಗೆ ಯಾರನ್ನೂ ಕೊಲ್ಲುವ ಹಲ್ಲೆ ಮಾಡುವ ಅಧಿಕಾರ ಇಲ್ಲ. ಇದ್ರ ವಿರುದ್ದ ಎಲ್ಲರೂ ವಿರೋಧ ಮತ್ತು ಖಂಡನೆ ಮಾಡಬೇಕು. ಅಧಿಕಾರಿಗಳು ಎಲ್ಲರೂ ಒಂದೇ ರೀತಿ ಕಾನೂನ ನಡೆಸಲಿ. ಸರ್ಕಾರ ಇದ್ರ ಬಗ್ಗೆ ಅಧಿಕಾರಿಗಳಿಗೆ ಎಸ್ಒಪಿ ಮಾಡಲಿ. ಒಂದು ಒಂದು ಅಧಿಕಾರಿ ಒಂದು ಮಾದರಿ ಕ್ರಮ ನಿಯಮ ಮಾಡ್ತಾರೆ. ಈ ಹಿಂದೆ ಪೊಲಿಸರಿಗೆ ಮನವಿ ಮಾಡಿದ್ದೆ ಸಮಾಜದ ಕಾನೂನು ಸುವ್ಯವಸ್ಥೆ ದಕ್ಕೆ ತರುವಂತೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಿ ಎಂದಿದ್ದೆ ಎಂದರು.
ಆದ್ರೆ ಆಗಿನ ಅಧಿಕಾರಿಗಳು ಇದರ ಬಗ್ಗೆ ಕೈ ಚೆಲ್ಲಿ ಕೂತಿದ್ರು. ಇದೀಗಾ ಬಂದ ಅಧಿಕಾರಿಗಳು ಕಠಿಣ ಕ್ರಮ ಜಾರಿ ಮಾಡಿದ್ರು. ಕಾನೂನು ಸುವ್ಯವಸ್ಥೆ ಜಿಲ್ಲೆಯಲ್ಲಿ ಸರಿಯಾಗಿದೆ. ಇದಕ್ಕಾಗಿ ಸರ್ಕಾರ ಎಸ್ಒಪಿ ಮಾಡಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಜಿಲ್ಲೆಯ ಶಾಂತಿ ಸುವವ್ಯಸ್ಥೆ ಹಾಳಾಗುವಂತಹ ಯಾವುದೇ ಘಟನೆಗೆ ನಾವು ಬೆಂಬಲ ಕೊಡಬಾರದು. ಈ ಬಗ್ಗೆ ಜಿಲ್ಲೆಯ ಜನ್ರು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮೆರೆಯಬೇಕು.
ಸುಹಾಸ್ ಹತ್ಯೆಯಾದಾಗಲೇ ಪ್ರತಿಕಾರ ಆಗುವ ಎಚ್ಚರಿಕೆನೂ ಇತ್ತು. ಎಲ್ಲಾ ಕಡೆ ಧ್ವೇಷ ಭಾಷಣ ಮಾಡ್ತಾ ಇದ್ರು. ಆದ್ರೆ ಇಲಾಖೆ ಈ ಬಗ್ಗೆ ಸುಮ್ಮನೆ ಇತ್ತು. ಇದಾದ ಬಳಿಕ ನಡೆದ ಘಟನೆ ಜಿಲ್ಲೆಗೆ ಕಪ್ಪು ಚುಕ್ಜೆ ಆಗಿದೆ. ಪರಸ್ಪರ ಸಹೋದರಂತೆ ಇದ್ದ ಸ್ನೇಹಿತರು ಮನೆಗೆ ಕೆಲಸಕ್ಕೆ ಕರೆದು ಹತ್ಯೆ ಮಾಡ್ತಾರೆ. ಈ ರೀತಿಯ ಕೃತ್ಯ ಮಾಡಿದವರಿಗೆ ಯಾರು ಸಹಕಾರ ನೀಡಬಾರದು. ವಕೀಲರು, ಕೋರ್ಟ್, ಜನಪ್ರತಿನಿಧಿಗಳು ಯಾರು ಕೂಡಾ ಇವ್ರಿಗೆ ಬೆಂಬಲ ನೀಡಬಾರದು. ಇದ್ರಿಂದ ಮಾತ್ರ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಡಲು ಸಾಧ್ಯ ಎಂದರು.

