ಮಂಗಳೂರು:  ಐವಾನ್ ಡಿ ಸೋಜ ನೀಡಿದ್ದು ರಾಷ್ಟ್ರ ದ್ರೋಹದ ಹೇಳಿಕೆ. ಯಾವ ರೀತಿ ಬಾಂಗ್ಲಾದಲ್ಲಿ ಜನ ದಂಗೆ ಎದ್ದಿದ್ದಾರೆ,ಅದೇ ರೀತಿ ಕರ್ನಾಟಕದ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ.ಈ ದೇಶದಲ್ಲಿ ಕೋಟ್ಯಂತರ ಹಿಂದೂಗಳಿದ್ದಾರೆ.ಪ್ರತಿಭಟನೆ ಹೆಸರಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ,ಹಿಂದೂ ದೇವಸ್ಥಾನಗಳನ್ನ ಧ್ವಂಸ ಮಾಡಿದ್ದಾರೆ. ಒಬ್ಬ ಜನಪ್ರತಿನಿಧಿ ಬಾಂಗ್ಲಾ ದೇಶದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರೆ ಇದಕ್ಕೆ ಅರ್ಥ ಇದೆಯೇ?ಸದ್ಯ ಐವಾನ್ ಡಿ ಸೋಜ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹೋರಾಟ ನಡೆಸುತ್ತಿದೆ. ಒಂದು ವೇಳೆ ಬಿಜೆಪಿ ಹೋರಾಟಕ್ಕೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೆ ಹೋದರೆ ವಿಶ್ವ ಹಿಂದೂ ಪರಿಷತ್ ಈ ಹೋರಾಟವನ್ನ ಹೇಗೆ ಕೈ ಗೆತ್ತಿಕೊಳ್ಳಬೇಕು ಎಂದು ಚಿಂತಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಹಿಂದು ಕಾರ್ಯಕರ್ತ ಎನ್ನಲಾದ ಯುವಕನ ಬಂಧನ ವಿಚಾರ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮೌನ ಮುರಿದಿದ್ದಾರೆ.ಕಾರ್ಕಳ ಅತ್ಯಾಚಾರ ಪ್ರಕರಣದಲ್ಲಿ ಅಭಯ್ ಎಂಬಾತನ ಬಂಧನವಾಗಿದೆ. ಇನ್ನು ಪ್ರತಿಕ್ರಿಯೆ ನೀಡಿರುವ ಅವರು, ಅಭಯ್ ಆಗಿರಲಿ ಅಹ್ಮದ್ ಆಗಿರಲಿ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಸಮಾಜ ಗಾತುಕ ಕೃತ್ಯದಲ್ಲಿ ಭಾಗಿಯಾಗುವವರಿಗೆ ನಮ್ಮ ಸಂಘಟನೆಯಲ್ಲಿ ಕೆಲಸ ಮಾಡುವ ಅವಕಾಶ ಇಲ್ಲಾ, ಡ್ರಗ್ಸ್ ವಿರುದ್ಧ ನಮ್ಮ ಸಂಘಟನೆ ಸಾಕಷ್ಟು ಹೋರಾಟ ಮಾಡಿದೆ.ಯಾರೆ ಇರಲಿ ಅವರನ್ನ ನಮ್ಮ ಸಂಘಟನೆಯ ಕಾರ್ಯಕರ್ತ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಸಾವಿರಾರು ಜನರು ನಮ್ಮ ಸಂಘಟನೆಯ ಕಾರ್ಯಕ್ರಮಕ್ಕೆ ಬರುತ್ತಾರೆ.ಎಲ್ಲರನ್ನು ನಮ್ಮ ಸದ್ಯಸರು ಎಂದು ಒಪ್ಪಿಕೊಳ್ಳಲು ನಾವಂತು ತಯಾರಿಲ್ಲ, ಅಂತವರಿಗೆ ನಾವು ಅವಕಾಶವನ್ನೂ ಕೊಡಲ್ಲ