ಮಂಗಳೂರು: ಆರೋಗ್ಯ ಸಚಿವರಾದ ಶ್ರೀಯುತ ಯು ಟಿ ಖಾದರ್ ಅವರ ಸೂಚನೆಯ ಮೇರೆಗೆ ಸಿಹಿ ತಿಂಡಿ ತಿನಿಸು ತಯಾರಿಕಾ ಘಟಕ ಹಾಗೂ ಮಾರಾಟ ಮಾಡುವ ಆಹಾರೋದ್ಯಮಗಳ ಮೇಲೆ ಪರಿಶೀಲನೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾಕ್ಟರ್ ಪ್ರವೀಣ್ ಕುಮಾರ್ ಸಿಎಚ್ ಇವರ ನೇತೃತ್ವದ ತಂಡ ದಾಳಿಯನ್ನು ನಡೆಸಲಾಯಿತು.
ಬೇಕರಿ ಆಹಾರ ಉತ್ಪನ್ನಗಳನ್ನು ರಿಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ನಗರದ ಫಲ್ನೀರ್ ಜಂಕ್ಷನ್ ನಲ್ಲಿರುವ ಜಿ.ಐ ಬೇಕರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಆಹಾರದ ಪ್ಯಾಕೆಟ್ ಗಳ ಮೇಲೆ ತಯಾರಿಕಾ ದಿನಾಂಕ, ಬಳಕೆಯ ಅವಧಿ ಮೀರುವ ದಿನಾಂಕ ಬ್ಯಾಚ್ ನಂಬರ್ ಎಫ್ ಎಸ್ ಎಸ್ ಎ ಐ ಲೈಸೆನ್ಸ್ ನಂಬರ್ ಇಲ್ಲದ ಆಹಾರ ಉತ್ಪನ್ನಗಳನ್ನು ಸೀಜ್ ಮಾಡಿ ಸೀಲ್ ಮಾಡಲಾಯಿತು.

