ಮಂಗಳೂರು: 2024 ರ ಸಾಲಿನ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನ್ಯೂಸ್‌ ಕರ್ನಾಟಕ ವಾಹಿನಿ ಅರ್ಪಿಸುವ ಪಾಥ್ವೆ ಎಂಟರ್ಪ್ರೈಸರ್ಸ್‌ ಸಹಯೋಗದಲ್ಲಿ ವೈಯಕ್ತಿಕ ರಾಧಾ ಹಾಗೂ ಕೃಷ್ಣ ವಿಡಿಯೋ ಸ್ಪರ್ಧೆ (ಕಾಂಟೆಸ್ಟ್‌) ಆಯೋಜಿಸಲಾಗಿದೆ.
ಭಾಗವಹಿಸಲು ಇಚ್ಚಿಸುವವರು ಇದೇ ಬರುವ ತಾರೀಕು ಆ.24ರ ಒಳಗೆ ತಮ್ಮ ವಿಡಿಯೋ ಗಳನ್ನು ಕಳಹಿಸ ತಕ್ಕದ್ದು.

ಸ್ಪರ್ಧಾ ನಿಬಂಧನೆಗಳು ಹೀಗಿವೆ. .
1. 6 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ
2. ವೈಯುಕ್ತಿಕವಾಗಿ ಭಾಗವಹಿಸತಕ್ಕದ್ದು (ರಾಧಾ ಅಥವಾ ಕೃಷ್ಣ)
3. ಕನಿಷ್ಠ ಎರಡು ನಿಮಿಷದ ಗರಿಷ್ಠ ಮೂರು ನಿಮಿಷದ ಒಳಗಿನ ವಿಡಿಯೋ ಮಾಡಿ ಕಳುಹಿಸತಕ್ಕದ್ದು
4. ಎಡಿಟ್‌ ಮಾಡಿದ ಮತ್ತು ವಾಟರ್‌ ಮಾರ್ಕ್‌ ಬಳಸಿದ ವಿಡಿಯೋಗಳನ್ನು ಸ್ವೀಕರಿಸಲಾಗುವುದಿಲ್ಲ
5. ವಿಡಿಯೋ ಸ್ವಾಭಾವಿಕವಾಗಿದ್ದು, ಇತ್ತೀಚಿಗೆ ತೆಗೆದ ವಿಡಿಯೋವಾಗಿರಬೇಕು
6. ವಿಡಿಯೋದ ಗುಣಮಟ್ಟ ಉತ್ತಮವಾಗಿರಬೇಕು
7. ಸ್ಪರ್ಧಿಗಳ ಜನನ ಪ್ರಮಾಣ ಅಥವಾ ಆಧಾರ್‌ ಕಾರ್ಡ್‌ ಪ್ರತಿ ಲಗತ್ತಿಸಬೇಕು
8. ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ತೀರ್ಮಾನವೇ ಅಂತಿಮ
9. ವಿಡಿಯೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 24-8-2024 ಸಂಜೆ 5:00 ಒಳಗೆ ಕಳುಹಿಸತಕ್ಕದ್ದು. ನಂತರ ಬಂದ ವಿಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ
10. ಹೆಚ್ಚು ಲೈಕ್ಸ್ ಹಾಗೂ ವೀವ್ಸ್ ಬಂದ ಮಗುವಿಗೆ ಬಹುಮಾನ
11. ವೈಯುಕ್ತಿಕ ರಾಧೆ ಹಾಗೂ ಕೃಷ್ಣ ವಿಡಿಯೋದಲ್ಲಿ ತೀರ್ಪುಗಾರರ ನಿರ್ಣಯದ ಮೂಲಕ
ಪ್ರಥಮ
ದ್ವಿತೀಯ
ತೃತೀಯ ಬಹುಮಾನ ನೀಡಲಾಗುವುದು
12. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ಬಹುಮಾನ ನೀಡಲಾಗುವುದು.

Whatsapp Image 2024 08 21 At 3.24.30 Pm
ಹೆಚ್ಚಿನ ಮಾಹಿತಿಗಾಗಿ: ಪ್ರತಿಮಾ ಪವಾರ್ +91 76762 18092 ‌ ಸಂಪರ್ಕಿಸಬಹುದು.