ಉಳ್ಳಾಲ: ಉಳ್ಳಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ಸುತ್ತಮುತ್ತಲು ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಿನಾಂಕ 23.07.2024 ರಂದು ಬೆಳಿಗ್ಗೆ ಎಳನೇ ತರಗತಿ ವಿದ್ಯಾರ್ಥಿ ಶಾಲೆಗೆ ಹೋಗುವಾಗ ನಾಲ್ಕೈದು ಬೀದಿ ನಾಯಿಗಳು ಸೇರಿ ದಾಳಿ ಮಾಡಿವೆ ಅದೃಷ್ಟವಶಾತ್ ಆಟೊ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿರುತ್ತದೆ. ಗಾಯ ಗೊಂಡ ವಿದ್ಯಾರ್ಥಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಾಲು ಮಾಡಲಾಗಿದೆ.

ಇತ್ತೀಚಿಗೆ ಉಳ್ಳಾಲ ಪರಿಸರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀದಿ ನಾಯಿಗಳ ಓಡಾಟ ಹೆಚ್ಚಾಗಿದೆ, ಶಾಲೆಗೆ ಮತ್ತು ಮದರಸ ಹೋಗುವ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ,, ಯಾವ ಸಂದರ್ಭದಲ್ಲಿ ಈ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ ಹೇಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ, ಘಟನೆ ನಡೆದ ಬಳಿಕ ಸೂಕ್ತ ಕ್ರಮ ಅಂತಹ ಹೇಳಿಕೆ ನೀಡಿ, ಘಟನಾ ಸ್ಥಳಕ್ಕೆ ಬೇಟಿ ನೀಡುವ ಬದಲು ಈ ಬೀದಿ ನಾಯಿಗಳನ್ನು ನಿಯಂತ್ರಣದಲ್ಲಿ ಇಡಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಇಲ್ಲದೆ ಹೋದಲ್ಲಿ ಬೀದಿ ನಾಯಿಗಳ ಹುಚ್ಚಾಟಕ್ಕೆ ಹಲವಾರು ಮಕ್ಕಳ ಬಲಿಯನ್ನು ನೀಡಬೇಕಾಗಿ ಬರಬಹುದು.

ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ನಗರ ಸಭೆ ಉಳ್ಳಾಲ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕಾಗಿದೆ. ಈಗಾಗಲೇ ಸುದ್ದಿ ವಾಹಿನಿಯಲ್ಲಿ ಬೀದಿ ನಾಯಿ ರಂಪಾಟದಿಂದ ಹಲವು ಪುಟ್ಟ ಕಂದಮ್ಮಗಳು ಬಲಿಯಾಗಿರುದನ್ನು ನೋಡಿದ್ದೇವೆ. ನಮ್ಮ ಮಕ್ಕಳ ಸುದ್ದಿಯು ಸುದ್ದಿ ವಾಹಿನಿಗಳಲ್ಲಿ ಬರುವ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಸಾಮಾಜಿಕ ಕಾಳಜಿಯೊಂದಿಗೆ ಈ ಚಿಕ್ಕ ಬರಹದೊಂದಿಗೆ ಸಂಬಂಧ ಪಟ್ಟವರ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ ಒಂದು ವೇಳೆ ಸಂಬಂಧಪಟ್ಟ ವರು ಈ ಬಗ್ಗೆ ಸ್ಪಂದಿಸದಿದ್ದರೆ, ಈ ಬಗ್ಗೆ ಜನಜಾಗ್ರತಿಯನ್ನು ಮೂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು‌‌ ಎಂದು ಸಾಮಾಜಿಕ ಕಾರ್ಯಕರ್ತ ತೌಸೀನ್ ಅಳೆಕಲ ಎಚ್ಚರಿಕೆ ನೀಡಿದ್ದಾರೆ.