ಮಂಗಳೂರು: ಮುಲ್ಕಿಯ ಮನೆಯೊಂದರಲ್ಲಿ ಬಾವಿಗೆ ಕಸ ಬೀಳದಂತೆ ಬಲೆ ಹಾಕಿದ್ದು ಅದರಲ್ಲಿ ಹೆಬ್ಬಾವು ಒಂದು ಸಿಕಿಕೊಂಡಿದ್ದು, ಬಿಡಿಸಲು ಹರಸಾಹಸ ಪಡುತಿತ್ತು. ಇದನ್ನ ಗಮನಿಸಿದ ಅಲ್ಲೇ ಕೆಲಸದಲ್ಲಿ ನಿರತರಾಗಿದ್ದ ಮೆಸ್ಕಾಂ ಸಿಬ್ಬಂದಿ ಮಂಜುನಾಥ್ ಡಿ ಮತ್ತು ಅವರ ಜೊತೆಯಲ್ಲಿ ಇದ್ದವರು ಹೆಬ್ಬಾವನ್ನ ರಕ್ಷಿಸಲು ಮುಂದಾದರು.

ಬಲೆಯಲ್ಲಿ ಸಿಲುಕಿಕೊಂಡಿದ್ದ ಹೆಬ್ಬಾವನ್ನ ಕಟರ್ ಮೂಲಕ ಬಲೆಯನ್ನ ಕತ್ತರಿಸಿ ಹಾವನ್ನ ಬೇರ್ಪಡಿಸಿ ಗೋಣಿ ಚೀಲದಲ್ಲಿ ಹಾಕಿ ಮರಳಿ ಕಾಡಿಗೆ ಬಿಡಲಾಯಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.

View this post on Instagram

A post shared by News Karnataka (@newskarnataka)