ಮಂಗಳೂರು: ಪುತ್ತೂರು ಶಾಸಕ ಅಶೋಕ್ ರೈ ಯಿಂದ ಕೆಆರ್ ಡಿ ಎಲ್ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಕೆಡಿಪಿ ಸಭೆಯಲ್ಲಿ ಅಶೋಕ್ ರೈ ಹೇಳಿಕೆಯನ್ನು ಬಿಜೆಪಿ ಶಾಸಕರು ಪ್ರಸ್ತಾಪಿಸಿದರು.

ಅಶೋಕ್ ರೈ ಹೇಳಿಕೆಯ ಬಗ್ಗೆ ಏನು ಕ್ರಮ ಆಗಿದೆ. ಅಶೋಕ್ ರೈ ಹೇಳಿಕೆ ಅನುಭವದ ಕೊರತೆ ಅಂತಾ ಹೇಳಿದ್ರಿ, ಅಶೋಕ್ ರೈ ಹೇಳಿಕೆಗೆ ಬೆಲೆ ಇಲ್ವಾ?. ಬಿಜೆಪಿ ಶಾಸಕರು ಮತ್ತು ಎಂಎಲ್ ಸಿ ಐವಾನ್ ಡಿಸೋಜಾ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಶಾಸಕರ ಪ್ರಶ್ನೆ ಸಚಿವ ಯುಟಿ ಖಾದರ್ ಉತ್ತರಿಸಿದರು. ಬಿಜೆಪಿವರು ಸರಿಯಾದ ಪ್ರಶ್ನೆಯಾಗಿ ಎತ್ತಿದ್ದಾರೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ಯಾರು ಮಾಹಿತಿ ನೀಡಿದ್ದಾರೆ ಈ ಬಗ್ಗೆ ತನಿಖೆ ಆಗ್ತಿದ್ದಾರೆ. ಯಾರೋ ಹೇಳಿದ್ದಾರೆ ಅಂತಾ ಕ್ರಮ ಕೈಗೊಳ್ಳೋಕೆ ಆಗಲ್ಲ. ಒಳ್ಳೆಯ ಅಧಿಕಾರಿಗಳಿಗೆ ತನಿಖೆ ಆಗದೆ ಕ್ರಮ ಕೈಗೊಳ್ಳೊಕೆ ಆಗಲ್ಲ. ಡೈರೆಕ್ಟ್ ವರ್ಕ್ ನಾನು ಇಲ್ಲಿ ತನಕ ಕೆಐಡಿಆರ್ ಎಲ್ ಗೆ ಕೊಟ್ಟಿಲ್ಲ. ಶಾಸಕರ ಹೇಳಿಕೆ ತಪ್ಪಾ? ಅಧಿಕಾರಿಗಳ ಹೇಳಿಕೆ ತಪ್ಪಾ ತನಿಖೆ ಆಗುತ್ತದೆ. ಅಶೋಕ್ ರೈ ಹೇಳಿಕೆ ಬಗ್ಗೆ ಉನ್ನತ ಮಟ್ಟದ ತನಕ ತನಿಖೆಗೆ ಜಿಲ್ಲಾಧಿಕಾರಿ ಗೆ ಖಾದರ್ ಸೂಚನೆ ನೀಡಿದರು.