ಮಂಗಳೂರು : ಕದ್ರಿ ಪಾರ್ಕ್ ಬೀದಿಬದಿ ವ್ಯಾಪಾರಸ್ಥರ ಮೇಲಿನ ಏಕಪಕ್ಷೀಯ ದಾಳಿಯನ್ನು ಖಂಡಿಸಿ ಕದ್ರಿ ಪಾರ್ಕ್ ಬಳಿ ಬೀದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಲಾಯಿತು.
ಏರ್ ಪೋರ್ಟ್ ರಸ್ತೆಯಲ್ಲಿ ಬೀದಿ ವ್ಯಾಪಾರ ನಿಷೇಧ ಆದೇಶ ಹಿಂಪಡೆಯಲು ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನಾ ಪ್ರದರ್ಶನ ಮಹಾ ನಗರ ಪಾಲಿಕೆಯ ಎದುರು ನಡೆಯಿತು.
ಕದ್ರಿ ಪಾರ್ಕ್ ಬೀದಿಬದಿ ವ್ಯಾಪಾರಸ್ಥರ ಮೇಲಿನ ಏಕಪಕ್ಷೀಯ ದಾಳಿಯಾಗಿ ೧ ತಿಂಗಳು ಕಳೆದರು ಪರಿಹಾರ ಇಲ್ಲಾ ಎಂದು ಸುನಿಲ್ ಕುಮಾರ್ ಬಜಾಲ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಿಂಗಳ ಹಿಂದೆ ಕದ್ರಿ ಪಾರ್ಕ್ ಬಳಿ ಗೂಡಂಗಡಿಗಳನ್ನ ಅಧಿಕಾರಿಗಳು ತೆರೆವುಗೊಳಿಸಿದ್ದರು.

