ಮಂಗಳೂರು: ಶಿಕ್ಷಣ ಸಚಿವರ ಸಭೆಯಲ್ಲಿ ಜಿಲ್ಲಾಧಿಕಾರಿ ವಿರುದ್ದ ಪ್ರತಿಭಾ ಕುಳಾಯಿ ಗರಂ ಆಗಿದ್ದು, ಶಿಕ್ಷಣ ಸಚಿವ ಮಧುಬಂಗಾರಪ್ಪ ಇದ್ದ ಸಭೆಯಲ್ಲೇ ಪ್ರತಿಭಾ ಕಿಡಿಕಾರಿದರು.
ಡಿಸಿ ಕಚೇರಿಯಲ್ಲಿ ಸಾಮಾಜಿಕ& ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಯನ್ನು ಸಭೆಯಲ್ಲಿ ವೇದಿಕೆಗೆ ಕರೆಯದ ಹಿನ್ನೆಲೆ ಗರಂ ಆದರು.
ಶಿಕ್ಷಣ ಸಚಿವರ ಸೂಚನೆ ಬಳಿಕ ವೇದಿಕೆಗೆ ಆಹ್ವಾನಿಸಲಾಯಿತು. ೨ ದಿನಗಳ ಹಿಂದೆ ನಾನು ಇಲ್ಲಿಗೆ ಬಂದಿದ್ದೆ. ಜಿಲ್ಲಾಧಿಕಾರಿಗೆ ೫ ನಿಮಿಷ ಸಹ ಮಾತನಾಡಲು ಸಮಯವಿರಲಿಲ್ಲ. ನಾವು ಈ ಮೊದಲು ಕೂಡ ಹಲವಾರು ಜಾಗಗಳಿಗೆ ಭೇಟಿ ನೀಡಿದ್ದೇವೆ. ಇದು ನಮ್ಮ ಡಿಪಾರ್ಟ್ ಮೆಂಟ್ ಗೆ ಸಂಬಂಧಪಟ್ಟ ಸಭೆಯಾಗಿತ್ತು.
ಶಿಕ್ಷಣ ಸಚಿವರು ವೇದಿಕೆಗೆ ಕರೆಯಲು ಹೇಳಿದ್ರೂ, ಡಿಸಿ ಸಂಬಂಧವಿಲ್ಲದಂತೆ ಇದ್ದರು. ಇದು ನೀವು ನೀಡುವ ಗೌರವವೇ?, ದ.ಕ ಡಿಸಿಗೆ ಪ್ರತಿಭಾ ಕುಳಾಯಿ ಪ್ರಶ್ನೆ ಮಾಡಿದರು. ಇಲ್ಲಿ ನಾನು, ನೀವು ಯಾರೂ ಸೆಲೆಬ್ರಿಟಿಯಲ್ಲ, ಕೆಲಸದ ನಿಮಿತ್ತ ನಾವು ಬಂದಾಗ ವರದಿಗೆ ಫೋಟೋವನ್ನು ಕೇಳಿದ್ದೆವು. ದಾಖಲೆಗಾಗಿ ಫೋಟೋ ಕೇಳಿದರೂ ನೀವು ತಿರಸ್ಕರಿಸಿದ್ದೀರಿ. ದ.ಕ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು.

