ಮಂಗಳೂರು : ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಕೌಶಲ್ಯಗಳ ತರಬೇತಿ ನೀಡುವ ಉದ್ದೇಶದ ‘ಪ್ರಥಮ್ ಚಿಕಿತ್ಸಾ ಫೌಂಡೇಶನ್’ (PCF) ಅ.2ರಂದು ಆನ್‌ಲೈನ್ ಮೂಲಕ ಉದ್ಘಾಟನೆಗೊಳ್ಳಲಿದೆ ಎಂದು ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಡಾ. ಜೀದು ರಾಧಾಕೃಷ್ಣನ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಹಾಗೂ ಸುತ್ತಮುತ್ತಲಿನಿಂದ ಆರಂಭಿಸಿ ದೇಶದಾದ್ಯಂತ ಸಾರ್ವಜನಿಕರನ್ನು ‘ಫಸ್ಟ್ ರೆಸ್ಪಾಂಡರ್ಸ್’ ಆಗಿ ತರಬೇತುಗೊಳಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಪ್ರಥಮ ಚಿಕಿತ್ಸೆ, ಸಿಪಿಆರ್ ಹಾಗೂ ತುರ್ತು ಸ್ಪಂದನೆ ಕುರಿತು ತರಬೇತಿ ನೀಡುವುದರ ಜತೆಗೆ, ಆರೋಗ್ಯ ಜಾಗೃತಿ, ರಕ್ತದಾನ–ಅಂಗದಾನ ಉತ್ತೇಜನ, ವೈದ್ಯಕೀಯ ಮತ್ತು ಮಾನವೀಯ ನೆರವು ಹಾಗೂ ದುರ್ಬಲ ವರ್ಗದವರ ಆರೋಗ್ಯ ರಕ್ಷಣೆಗೆ ಫೌಂಡೇಶನ್ ಆದ್ಯತೆ ನೀಡಲಿದೆ.

ಹಂತ ಹಂತವಾಗಿ ದೇಶದ ವಿವಿಧ ಭಾಗಗಳಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವಿಸ್ತರಿಸಿ, ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಬಲ್ಲ ತರಬೇತುಗೊಂಡ ಪ್ರಥಮ ಚಿಕಿತ್ಸಕರ ಜಾಲ ನಿರ್ಮಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಫೌಂಡೇಶನ್‌ನ ವಿವಿಧ ಜವಾಬ್ದಾರಿಗಳನ್ನು ವಹಿಸುವ ಫ್ರೀಡಾ, ಆಯಿಷಾ, ಡಾ. ರಂಜನ್, ಡಾ. ಪ್ರಜ್ವಲ್ ಹಾಗೂ ರಮ್ಯಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)